ಮಡಿಕೇರಿ, ಏ. 8: ಕೊಡಗು ಗೌಡ ಕುಟುಂಬಗಳ ಮಧ್ಯೆ ಏರ್ಪಡಿಸಿರುವ ಪೈಕೆರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಹೆಸರು ನೋಂದಾಯಿಸಿ ಕೊಳ್ಳಲು ತಾ. 8 ಅಂತಿಮ ದಿನವೆಂದು ನಿಗದಿಪಡಿಸ ಲಾಗಿತ್ತು. ಇಂದಿನವರೆಗೆ ಸುಮಾರು 165ಕ್ಕೂ ಅಧಿಕ ತಂಡಗಳು ನೋಂದಾಯಿಸಿ ಕೊಂಡಿವೆ. ಇನ್ನು ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಚಿಸುವ ತಂಡಗಳಿಗೆ ಅಂತಿಮ ದಿನಾಂಕವನ್ನು ತಾ. 10ರ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಗೌಡ ಯುವ ವೇದಿಕೆ ತಿಳಿಸಿದೆ.