ಸೋಮವಾರಪೇಟೆ, ಏ. 8: ಇಲ್ಲಿನ ಅಕ್ಕನ ಬಳಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಇದರ ಅಂಗವಾಗಿ ತಾ. 9 ರಿಂದ (ಇಂದಿನಿಂದ) ತಾ. 11 ರವರೆಗೆ ಸ್ಥಳೀಯ ವೀರಶೈವ ಸಮುದಾಯ ಭವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಅಧ್ಯಕ್ಷೆ ಜಲಜಾ ಶೇಖರ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಳ್ಳಿ ಹಬ್ಬದ ಅಂಗವಾಗಿ ಅಕ್ಕಮಹಾದೇವಿ ಜಯಂತಿ ಹಾಗೂ ಮಹಿಳಾ ದಿನಾಚರಣೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ತಾ. 9 ರಂದು ಬೆಳಿಗ್ಗೆ 10 ಗಂಟೆಗೆ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವದು. ನಂತರ ಅಕ್ಕನ ಬಳಗದ ಸದಸ್ಯರಿಗೆ ವಿವಿಧ ಆಟೋಟಗಳು ನಡೆಯಲಿದ್ದು, ಸದಸ್ಯರುಗಳೇ ಸ್ವತಃ ತಯಾರಿಸಿದ ಬಗೆಬಗೆಯ ವಸ್ತು, ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದರು.

ತಾ. 10 ರಂದು ಬೆಳಿಗ್ಗೆ 7 ಗಂಟೆಗೆ ಅಕ್ಕಮಹಾದೇವಿ ಮಂಟಪದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದೆ. ತಾ. 11 ರಂದು ಬೆಳಿಗ್ಗೆ 10.30ಕ್ಕೆ ವೀರಶೈವ ಸಮುದಾಯ ಭವನದಲ್ಲಿ ಧಾರ್ಮಿಕ ಸಮಾರಂಭ ಆಯೋಜಿಸಲಾಗಿದೆ ಎಂದು ಜಲಜಾ ಶೇಖರ್ ಮಾಹಿತಿ ನೀಡಿದರು. ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ವಿರಕ್ತ ಮಠದ ಮಠಾಧೀಶರಾದ ಶ್ರೀ ವಿಶ್ವೇಶ್ವರ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷೆ ಜಲಜಾ ಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಭಾಷಣ ಕಾರರಾಗಿ ತುಮಕೂರಿನ ನಿವೃತ್ತ ಉಪನ್ಯಾಸಕಿ ಅಮೃತಾ ವೀರಭದ್ರಯ್ಯ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ವೀರಶೈವ ಸಮಾಜದ ಯಜಮಾನ ರಾದ ಕೆ.ಎನ್. ಶಿವಕುಮಾರ್, ಶೆಟ್ರು ಕೆ.ಎನ್. ತೇಜಸ್ವಿ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಕೆ.ಎನ್. ಮಹೇಶ್ ಅವರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಅರಸೀಕೆರೆಯ ಪದ್ಮಾ ಶಿವಪ್ಪ ಮತ್ತು ಸೋಮವಾರಪೇಟೆಯ ಲಲಿತಮ್ಮ ವೀರಭದ್ರಪ್ಪ ಅವರು ಗಳಿಂದ ವಚನಗಾಯನ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ 9 ಮಂದಿಯನ್ನು ಸನ್ಮಾನಿಸಲಾಗುವದು. ಇದರೊಂದಿಗೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಅಕ್ಕನ ಬಳಗದ ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್, ಕಾರ್ಯದರ್ಶಿ ಲತಾ ಮಂಜುನಾಥ್, ಸಹ ಕಾರ್ಯದರ್ಶಿ ಜಲಜಾ ವಿಜಯ್‍ಕುಮಾರ್, ಖಜಾಂಚಿ ಸುಮಾ ಸುದೀಪ್, ನಿರ್ದೇಶಕಿ ಉಷಾ ತೇಜಸ್ವಿ ಅವರುಗಳು ಉಪಸ್ಥಿತರಿದ್ದರು.