ಮಡಿಕೇರಿ, ಏ. 9: ಭಾರತೀಯ ವಾಯುಪಡೆಯವರು ಏರ್‍ಮನ್-ವೈ ಏರ್‍ಮನ್ ಗ್ರೂಪ್-ವೈ (ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೈನಿಂಗ್ ಇನಸ್ಟ್ರಕ್ಟರ್ ಹಾಗೂ ಭಾ.ವಾ.ಸೇ.ಪೊಲೀಸ್ ಹುದ್ದೆಗಳಿಗೆ ಮಾತ್ರ) ಹುದ್ದೆಗಳ ಭರ್ತಿಗಾಗಿ ತಾ. 27 ರಿಂದ 30 ರವರೆಗೆ ಹಾಸನದ ಸಾಲಗಾಮೆ ರಸ್ತೆಯ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಮೆಗಾ ನೇಮಕಾತಿ ರ್ಯಾಲಿ ನಡೆಯಲಿದೆ. ಅರ್ಹತೆಗಳು: ಏರ್‍ಮನ್ ಗ್ರೂಪ್-ವೈ (ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೈನಿಂಗ್ ಇನಸ್ಟ್ರಕ್ಟರ್ ಹಾಗೂ ಭಾ.ವಾ.ಸೇ. ಪೊಲೀಸ್ ಹುದ್ದೆಗಳಿಗೆ ಮಾತ್ರ), ದ್ವಿತೀಯ ಪಿ.ಯು.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ. 50 ಅಂಕಗಳೊಂದಿಗೆ ತೇರ್ಗಡೆ ಹಾಗೂ ಆಂಗ್ಲ ಭಾಷೆಯಲ್ಲಿ ಶೇ. 50 ಅಂಕಗಳನ್ನು ಪಡೆದಿರಬೇಕು. ಎತ್ತರ 165 ಸೆಂ.ಮೀ. ಅಭ್ಯರ್ಥಿಗಳು ದಿನಾಂಕ: 7.7.1997 ಹಾಗೂ 20.12.2000 ರೊಳಗೆ ಜನಿಸಿರಬೇಕು.
ಏರ್‍ಮನ್ ಮೆಗಾ ನೇಮಕಾತಿ ರ್ಯಾಲಿಯ ವೇಳಾಪಟ್ಟಿ: ತಾ. 27 ರಂದು ಏರ್‍ಮನ್ ಗ್ರೂಪ್-ವೈ (ನಾನ್ ಟೆಕ್ನಿಕಲ್ ಟ್ರೇಡ್) ಲಿಖಿತ ಪರೀಕ್ಷೆ ಹಾಗೂ ಅಡಾಪ್ಟ್ ಎಬಿಲಿಟಿ ಟೆಸ್ಟ್-1, ಏಪ್ರಿಲ್, 28 ರಂದು ಏರ್‍ಮನ್ ಗ್ರೂಪ್-ವೈ (ನಾನ್ ಟೆಕ್ನಿಕಲ್ ಟ್ರೇಡ್)-ದೇಹದಾಢ್ರ್ಯತೆ ಪರೀಕ್ಷೆ, ಅಡಾಪ್ಟ್ ಎಬಿಲಿಟಿ ಟೆಸ್ಟ್-2 ಹಾಗೂ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಬೆಳಿಗ್ಗೆ 10 ಗಂಟೆಯೊಳಗೆ ಎಸ್.ಎಸ್. ಎಲ್.ಸಿ. ಹಾಗೂ ಪಿ.ಯು.ಸಿ. ವಿದ್ಯಾರ್ಹತೆಗಳ ಮೂಲ ದಾಖಲಾತಿ ಗಳೊಂದಿಗೆ ನಾಲ್ಕು ಸೆಟ್ ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಹೋಗಬೇಕು. ಇತ್ತೀಚಿನ ಏಳು ಪಾಸ್ ಪೋರ್ಟ್ ಅಳತೆಯ ಬಣ್ಣದ ಫೋಟೋಗಳನ್ನು ತೆಗೆದುಕೊಂಡು ಹೋಗ ಬೇಕಾಗಿರುತ್ತದೆ. ಲಿಖಿತ ಪರೀಕ್ಷೆಗೆ ಒಂದು ಹೆಚ್.ಬಿ. ಪೆನ್ಸಿಲ್, ನೀಲಿ, ಕಪ್ಪು ಶಾಯಿಯ, ಡಾಟ್ ಪೆನ್ ಮತ್ತು ಎರೇಸರ್‍ಗಳನ್ನು ತೆಗೆದುಕೊಂಡು ಹೋಗಬೇಕು. ಎರಡು ಸ್ವ-ವಿಳಾಸದ ಲಕೋಟೆಗಳನ್ನು ತೆಗೆದುಕೊಂಡು ತರಬೇಕು. ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರದ ಮೂಲಪ್ರತಿ ಹಾಗೂ ನಾಲ್ಕು ನಕಲು ಪ್ರತಿಗಳು. ಈ ದಾಖಲಾತಿಗಳೊಂದಿಗೆ ವರದಿ ಮಾಡಿ ಕೊಳ್ಳಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾ ಧಿಕಾರಿ ಸಿ. ಜಗನ್ನಾಥ್ ತಿಳಿಸಿದ್ದಾರೆ.