ಮಡಿಕೇರಿ, ಏ. 9: ಇಲ್ಲಿನ ಪೇಟೆ ರಾಮಮಂದಿರ ಬಳಿಯಿಂದ ಮಾರುಕಟ್ಟೆಯನ್ನು ಸಂಪರ್ಕಿಸುವ ಹಿಲ್ ರಸ್ತೆಯ ಡಾಂಬರೀಕಣ ಕಾಮಗಾರಿ ಇಂದು ನೆರವೇರಿತು.
ಈ ಹಿಂದೆ ನಿರ್ಮಿಸಲಾಗಿದ್ದ ಕಾಂಕ್ರಿಟ್ ರಸ್ತೆ ಕಳಪೆ ಕಾಮಗಾರಿಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದ ರಸ್ತೆಗೆ ಕೊನೆಗೂ ಮುಕ್ತಿ ಸಿಕ್ಕಿದಂತಾಗಿದ್ದು, ರೂ. 5 ಲಕ್ಷ ವೆಚ್ಚದ 185 ಮೀ.ವರೆಗೆ ಡಾಂಬರೀಕರಣ ಮಾಡಲಾಯಿತು. ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭ ವಾರ್ಡ್ ಸದಸ್ಯೆ ತಜಸ್ಸುಂ ಮತ್ತೋರ್ವ ಸದಸ್ಯ ಪೀಟರ್, ಅಭಿಯಂತರ ಅರುಣ್, ಗುತ್ತಿಗೆದಾರ ಕದೀರ್ ಇದ್ದರು.