ಮಡಿಕೇರಿ, ಏ.9 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನೆಲೆ ನಿಂತಿರುವ ತುಳುಭಾಷಿಕ ಸಮುದಾಯವನ್ನು ಸಂಘಟಿಸಲು ತುಳು ಭಾಷೆಯ ಪತ್ರಿಕೆ ಅತ್ಯಂತ ಸಹಕಾರಿಯಾಗಿದೆ ಎಂದು ತುಳುವೆರ ಜನಪದ ಕೂಟದ ಸ್ಥಾಪಕ ಅಧ್ಯಕ್ಷ ಕಿಲ್ಪಾಡಿ ಶೇಖರ್ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸಮುದ್ರ ಹೋಟೆಲ್ ಸಭಾಂಗಣದಲ್ಲಿ ಪಿ.ಎಂ.ರವಿ ಸಂಪಾದಕತ್ವದ ತುಳುಭಾಷೆಯ ‘ತಿಂಗೊಲ್ದ ಬೊಲ್ಪು’ ಮಾಸಿಕ ಪತ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡಿದರು. ತುಳು ಭಾಷಾ ಸಂಸ್ಕøತಿಯ ಬೆಳವಣಿಗೆಗೆ ಸಹಕಾರಿಯಾದ ಪತ್ರಿಕೆಯ ಬೆಳವಣಿಗೆಗೆ ಸಮುದಾಯ ಬಾಂಧವರು ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು.
ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಿಕೆಯ ಸಂಪಾದಕ ಪಿ.ಎಂ. ರವಿ ಮಾತನಾಡಿ, ತುಳು ಭಾಷಾ ಪತ್ರಿಕೆಯ ಮೂಲಕ ಜಿಲ್ಲೆಯಲ್ಲಿ ನೆಲೆಸಿರುವ ಅಂದಾಜು 2 ಲಕ್ಷ ತುಳು ಭಾಷಿಕ ಸಮುದಾಯದ ಸಂಸ್ಕøತಿ, ಆಚಾರ, ವಿಚಾರಗಳನ್ನು ಸಂರಕ್ಷಿಸಿ ಪ್ರಚುರ ಪಡಿಸುವದು ಪ್ರಮುಖ ಉದ್ದೇಶವಾಗಿದೆ ಎಂದರು.
ಕೂಟದ ಜಿಲ್ಲಾ ಸಂಚಾಲಕ ಶ್ರೀಧರ ನೆಲ್ಲಿತ್ತಾಯ ಮಾತನಾಡಿ, ಕೊಡಗಿನಲ್ಲಿರುವ ಕೊಡವ, ಬ್ಯಾರಿ, ಅರೆಭಾಷೆಗಳ ಬೆಳವಣಿಗೆಗಳಿಗೆ ಆಯಾ ಭಾಷೆಗಳ ಅಕಾಡೆಮಿಗಳಿಂದ ಸಾಕಷ್ಟು ಕೆಲಸÀ ಕಾರ್ಯಗಳು ನಡೆಯುತ್ತಿದೆ. ತುಳು ಭಾಷೆಯನ್ನು ಇತರ ಸಮುದಾಯಗಳಿಗೆ ಕಲಿಸುವ ನಿಟ್ಟಿನ ಪ್ರಯತ್ನವು ಪತ್ರಿಕೆಯಿಂದ ನಡೆಯಬೇಕೆಂದರು.
ಮಡಿಕೆÉೀರಿ ಆಕಾಶವಾಣಿಯಲ್ಲಿ ತುಳು ಭಾಷೆಯ ವಾರ್ತಾ ಪ್ರಸಾರಕ್ಕೆ ಈಗಾಗಲೇ ಮನವಿಯನ್ನು ಸಲ್ಲಿಸಲಾಗಿದೆ. ಇದಕ್ಕೆ ತುಳು ಭಾಷಿಕ ಸಮುದಾಯ ಬಾಂಧವರೆಲ್ಲರು ಬೆಂಬಲವನ್ನು ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.
ಮೊಗೇರ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ಜಿಪಂ ಮಾಜಿ ಅಧ್ಯಕ್ಷ ಬಿ.ಶಿವಪ್ಪ ಮಾತನಾಡಿದರು. ಬಿಲ್ಲವ ಸಮಾಜದ ಜಿಲ್ಲಾ ಅಧ್ಯಕ್ಷರು ಹಾಗೂ ಕೂಟದ ಉಪಾಧ್ಯಕ್ಷ ಬಿ.ವೈ. ಆನಂದ ರಘು, ಬಂಟರ ಸಂಘÀದ ಮಾಜಿ ಅಧ್ಯಕ್ಷ ಐತ್ತಪ್ಪ ರೈ, ಕುಲಾಲ ಸಮಾಜದ ಅಧ್ಯಕ್ಷ ನಾಣಯ್ಯ, ವಿಶ್ವ ಕರ್ಮ ಸಮುದಾಯದ ರಮೇಶ್ ಆಚಾರ್ಯ, ಕೂಟದ ಮಡಿಕೇರಿ ಅಧ್ಯಕ್ಷ ಪ್ರಭು ರೈ, ವೀರಾಜಪೇಟೆ ತಾಲೂಕು ಅಧ್ಯಕ್ಷ ದಾಮೋದರ ಮೊದಲಾದವರು ಉಪಸ್ಥಿತರಿದ್ದರು. ಸಾವಿತ್ರಿ ಪ್ರಾರ್ಥಿಸಿ, ಸತೀಶ್ ಸ್ವಾಗತಿಸಿದರು. ಜಯಪ್ಪ ಕಾರ್ಯಕ್ರಮ ನಿರೂಪಿಸಿ, ಆನಂದ್ ವಂದಿಸಿದರು.