ಮಡಿಕೇರಿ, ಏ. 9: ಮಹಾರಾಷ್ಟದ ನಾಸಿಕ್‍ನಲ್ಲಿ ಇತ್ತೀಚೆಗೆ ನಡೆದ 37ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್‍ನಲ್ಲಿ ಭಾಗವಹಿಸಿದ ನಗರದ ಹೋಂಗಾರ್ಡ್ ಸಿಬ್ಬಂದಿ ವೈ.ಎನ್. ವಿಶಾಲಾಕ್ಷಿ ಅವರು 5000 ಮೀಟರ್ ನಡಿಗೆಯಲ್ಲಿ ದ್ವಿತೀಯ ಹಾಗೂ ಬಾರದ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಸಿಂಗಾಪುರದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.