ಮಡಿಕೇರಿ, ಏ. 9: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಿದ ವೈದ್ಯಕೀಯ ಸೇವಾ ಕ್ಷೇತ್ರಗಳ ಕಾರ್ಯಯೋಜನೆಗಳಿಗೆ ಸಹಕಾರ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಕುಟುಂಬ ಕಲ್ಯಾಣ ಕಾಯಕ್ರಮ ಮತ್ತು ನೇತ್ರ ಶಸ್ತ್ರಚಿಕಿತ್ಸಾ ಕಾರ್ಯಕ್ರಮಗಳಲ್ಲಿ ವೈದ್ಯಕೀಯ ಸಹಕಾರ ನೀಡಿದ ಜಿಲ್ಲಾಸ್ಪತ್ರೆ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಪೆÇನ್ನಮ್ಮ, ಜ್ಯೋತಿ, ವನಜಾ,ಜಯಮಾಲ, ಅನಿತಾ, ಜಾನಕಿ, ನಾಣಯ್ಯ, ಅನಿತಾ ಮತ್ತು ರಾಜು ಅವರುಗಳನ್ನು ಸನ್ಮಾನಿಸಿ ಇವರ ವೈದ್ಯಕೀಯ ಸೇವಾ ಕಾರ್ಯಗಳಿಗೆ ಶ್ಲಾಘನೆ ವ್ಯಕ್ತಪಡಿಸಲಾಯಿತು.
ಈ ಸಂದರ್ಭ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಸಿ.ಆರ್.ಪ್ರಶಾಂತ್, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಕಾರ್ಯದರ್ಶಿ ಡಾ.ನವೀನ್, ರೋಟರಿ ಮಡಿಕೇರಿಯ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ ಹಾಜರಿದ್ದರು.