ನಾಪೋಕ್ಲು, ಏ. 9: ನೂತನ ಸಂವತ್ಸರ ಯುಗಾದಿ ಉತ್ಸವ ಪ್ರಯುಕ್ತ ಮಡಿಕೇರಿ ಗ್ರಾಮಾಂತರ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಾಪೋಕ್ಲು ಪಟ್ಟಣದಲ್ಲಿ ಗಣವೇಷಧಾರಿ ಸ್ವಯಂ ಸೇವಕರಿಂದ ಪಥ ಸಂಚಲನ ನಡೆಯಿತು.ಬಳಿಕ ಇಲ್ಲಿನ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಂಘದ ಮಂಗಳೂರು ವಿಭಾಗ ಕಾರ್ಯಕಾರಿಣಿ ಸದಸ್ಯ ಸುರೇಶ್ ಬೌದ್ಧಿಕ್ ಮಾಡಿದರು. ಅಧ್ಯಕ್ಷತೆಯನ್ನು ಶಿವಚಾಳಿಯಂಡ ಲವ ವಹಿಸಿದ್ದರು.
ರವಿ ಭೂತನಕಾಡು ಪ್ರಾರ್ಥಿಸಿ, ತಾಲೂಕು ಕಾರ್ಯವಾಹ ಜಾಲಿ ಪೂವಪ್ಪ ಸ್ವಾಗತಿಸಿ, ಬಿ.ಬಿ. ಮಹೇಶ್ ವಂದಿಸಿದರು.
ಪಥ ಸಂಚಲನದಲ್ಲಿ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಸದಸ್ಯ ಮುರುಳಿ ಕರುಂಬಮ್ಮಯ್ಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮನುಮುತ್ತಪ್ಪ ಸೇರಿದಂತೆ ಐನೂರಕ್ಕೂ ಅಧಿಕ ಗಣವೇಷಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದರು.