ಕೂಡಿಗೆ, ಏ. 9: ಇಲ್ಲಿಗೆ ಸಮೀಪದ ಪವಿತ್ರ ಕಾವೇರಿ ದಡದಲ್ಲಿರುವ ಕಣಿವೆ ಶ್ರೀ ರಾಮಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ನಗೆಹಬ್ಬ ಕಾರ್ಯಕ್ರಮವು ನಡೆಯಿತು.

ಹೆಸರಾಂತ ಸುಧಾ ಬರಗೂರು, ರಮೇಶ್‍ಬಾಬು, ಮ್ಯಾಜಿಕ್ ಬದ್ರಿನಾಥ್‍ರವರು ನಗೆಹಬ್ಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕುಶಾಲನಗರದ ನಾಟ್ಯ ಮಯೂರಿ ನೃತ್ಯಾಲಯದ ವತಿಯಿಂದ ಸಾಂಸ್ಕøತಿಕ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.

ಹಾಸನದ ಮೋಹನ್ ಮೆಲೋಡಿಸ್ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆದವು ಹಾಗೂ ಸಮಿತಿಯ ವತಿಯಿಂದ ಕಬಡ್ಡಿ ಕ್ರೀಡಾಕೂಟ ನಡೆಯಿತು.

ಕೂಡಿಗೆಯ ಬಸವೇಶ್ವರ ಕಲಾವೃಂದದ ವತಿಯಿಂದ ತ್ಯಾಗಿ (ಸಾಮಾಜಿಕ) ನಾಟಕ ಪ್ರದರ್ಶನ ನಡೆಯಿತು.

ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ ಉದ್ಘಾಟಸಿ ಮಾತನಾಡುತ್ತಾ, ಧಾರ್ಮಿಕ ಹಿನ್ನೆಲೆಗಳು ಮತ್ತು ಹಿಂದೂ ಸಂಸ್ಕøತಿಯನ್ನು ಬಿಂಬಿಸುವ ಹೆಚ್ಚು ವಿಷಯಗಳನ್ನು ಹೊಂದಿರುವಂತಹ ಗ್ರಾಮೀಣ ಪ್ರದೇಶದ ಕಲೆಗಳನ್ನು ಬೆಳೆಸುವ ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್.ಸುರೇಶ್ ಮಾತನಾಡಿ, ದೇವಾಲಯ ಸಮಿತಿಯ ವತಿಯಿಂದ ಹಮ್ಮಿಕೊಂಡು ಬರುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನತೆಯ ಪ್ರತಿಭೆಗಳನ್ನು ಕಲೆ ಮತ್ತು ಸಂಸ್ಕøತಿಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ನಶಿಸಿ ಹೋಗುತ್ತಿರುವ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ದೇವಾಲಯ ಸಮಿತಿಯ ಕಾರ್ಯದರ್ಶಿ ಶೇಷಾಚಲ, ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಸವರಾಜು, ಕಣಿವೆಯ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ, ಕಣಿವೆಯ ವಿವಿಧ ಸ್ತ್ರೀ-ಶಕ್ತಿ ಮತ್ತು ಸ್ವ-ಸಹಾಯ ಗುಂಪಿನ ಪದಾಧಿಕಾರಿಗಳು, ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್. ಮಾಧವ ಸೇರಿದಂತೆ ಸಮಿತಿಯ ನಿರ್ದೇಶಕರುಗಳು ಉಪಸ್ಥಿತರಿ ದ್ದರು. ಕೆ.ಆರ್. ಲೋಕೇಶ್ ಸ್ವಾಗತಿಸಿ, ಮಹದೇವ್ ವಂದಿಸಿದರು.