ಮಡಿಕೇರಿ, ಏ. 9: ಡಾ. ಕಸ್ತೂರಿ ರಂಗನ್ ವರದಿಯಲ್ಲಿರುವ ಅಂಶಗಳನ್ನು ಇಂಗ್ಲೀಷ್- ಕನ್ನಡದಲ್ಲಿ ಜಿಲ್ಲೆಯ ಜನತೆಗೆ ಹಂಚಲು ಸಿದ್ಧಪಡಿಸಿರುವ ಕರಪತ್ರವನ್ನು ವಿವಿಧ ಸಂಘಟನಗಳ ಪ್ರಮುಖರು ಮೂರ್ನಾಡಿನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಬಿಡುಗಡೆ ಮಾಡಿದರು.

ಬಸವನ ದೇವರ ಬನ ಸಂರಕ್ಷಣಾ ಸಮಿತಿಯ ಡಾ. ಬಿ.ಸಿ. ನಂಜಪ್ಪ ಮಾತನಾಡಿ, ಜಾಗೃತಿ ಕರಪತ್ರ ಹಂಚುವ ಕಾರ್ಯಕ್ಕೆ ಕಾವೇರಿಸೇನೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ- ಜನರಲ್ ಕೆ.ಎಸ್. ತಿಮ್ಮಯ್ಯ ವೇದಿಕೆ, ಕೂರ್ಗ್ ಅಡ್ವೆನ್ಚರ್ ಟೂರಿಸಂ ಸರ್ವೀಸಸ್ ಬೆಂಬಲ ಘೋಷಿಸಿದೆ ಎಂದು ಮಾಹಿತಿ ನೀಡಿದರು.

ಸೂಕ್ಷ್ಮ ಪರಿಸರ ವಲಯದ ಬಗ್ಗೆ ಆಯಾ ಪ್ರದೇಶದಲ್ಲಿ ವಾಸವಿರುವ ಸಾಮಾನ್ಯ ಜನರಿಗೆ, ರೈತರಿಗೆ, ಕಾಫಿ ಬೆಳೆಗಾರರಿಗೆ ತಿಳಿಸದೇ ಇರುವದರಿಂದ ಪ್ರತಿರೋಧ ಕಂಡು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ಜಾಗವನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಪಡುವದು ಸಹಜ. ಪ್ರಭಾವಿ ವ್ಯಕ್ತಿಗಳು ಮತ್ತು ರಾಜಕೀಯ ಧುರೀಣರ ಮಾತುಗಳನ್ನು ಸುಲಭವಾಗಿ ನಂಬುತ್ತಾರೆ. ಕಸ್ತೂರಿ ರಂಗನ್ ವರದಿಯಲ್ಲಿ ಕಾಡಿನ ಅಸುಪಾಸಿನ ಜನರನ್ನು ಒಕ್ಕಲೆಬ್ಬಿಸುವ ಯಾವದೇ ಪ್ರಸ್ತಾಪವಿಲ್ಲ. ಇದರ ಹೊರತಾಗಿಯು ಈ ವಿಧೇಯಕದಲ್ಲಿರುವ ಯಾವದೇ ಪ್ರಸ್ತಾಪದ ಕುರಿತು ಆಕ್ಷೇಪಣೆಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸಿ, ಮಾರ್ಪಾಡು ಮಾಡಲು ಬೇಡಿಕೆ ಸಲ್ಲಿಸಬಹುದಾಗಿದೆ. ಇಂತಹ ಅವಕಾಶಗಳಿರುವಾಗ ಇಡೀ ವನ್ಯ ಪರಿಸರ ಸೂಕ್ಷ್ಮ ಪ್ರದೇಶ ವೆಂದು ಘೋಷಿಸುವ ಕರಡು ಪ್ರತಿಯನ್ನು ವಿರೋಧಿಸುವದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.

ಅನುಮತಿಸಿದ ಚಟುವಟಿಕೆಗಳು, ಉತ್ತೇಜಿನ ಚಟುವಟಿಕೆಗಳು, ನಿರ್ಮಾಣ, ಅಂತರ್ಜಲ ಕೊಯ್ಲು ಸೇರಿದಂತೆ ವಾಣಿಜ್ಯ ನೀರು ಸರಬರಾಜು, ನಿಷೇಧಿತ ಚಟುವಟಿಕೆಗಳ ಬಗ್ಗೆ ಕರಪತ್ರದಲ್ಲಿ ಮಾಹಿತಿ ನೀಡಲಾಗಿದೆ. ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ಕರಪತ್ರದಲ್ಲಿ ಉತ್ತರ ನೀಡಲಾಗಿದೆ.

ಜಿಲ್ಲೆಯ ಜನತೆ ಯಾವದೇ ರೀತಿಯ ಸದುದ್ದೇಶದಿಂದ ಪ್ರಜ್ಞಾವಂತ ನಿರ್ಧಾರವನ್ನು ತೆಗೆದುಕೊಳ್ಳುವ ಮುಖಾಂತರ ಜಿಲ್ಲೆಯ ಅಸ್ತಿತ್ವವನ್ನು ಮುಂದಿನ ಪೀಳಿಗೆಗೆ ರಕ್ಷಿಸಿ ಹಸ್ತಾಂತರಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಬೇಕೆಂದು ನಂಜಪ್ಪ ಮನವಿ ಮಾಡಿದರು.

ಕರಡು ಪ್ರತಿಯ ಪೂರ್ಣ ಅರಿವಿಲ್ಲದ ಜಿಲ್ಲೆಯ ಮುಗ್ಧ ಜನತೆ, ತಲತಲಾಂತರದ ಅಸ್ತಿತ್ವ ಎಲ್ಲಿ ಬುಡಮೇಲಾಗುವದೋ ಎಂಬ ಅಸುರಕ್ಷತೆಯಿಂದ ಇದನ್ನು ವಿರೋಧಿ ಸುವದರೊಂದಿಗೆ ಬಂಡವಾಳ ಶಾಹಿಗಳ ಮತ್ತು ದಂಧೆಕೋರರ ದಾಳಕ್ಕೆ ಬಲಿಪಶುಗಳಾಗುತ್ತಿದ್ದಾರೆ.

ಜಿಲ್ಲೆಯ ಅಸ್ತಿತ್ವ ಮತ್ತು ಮೂಲ ಸಂಸ್ಕøತಿಗೆ ಮಾರಕವಾದ ಭತ್ತದ ಗದ್ದೆಗಳ ಪರಿವರ್ತನೆ, ಅಣೆಕಟ್ಟು, ನದಿ ತಿರುವುಗಳ ನಿರ್ಮಾಣ, ಜಲವಿದ್ಯುತ್ ಯೋಜನೆ, ಹೊಸ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮಾರ್ಗಗಳಂತ ಹವನ್ನು ಪೂರ್ಣವಾಗಿ ನಿಷೇಧಿಸಲ್ಪಟ್ಟರೆ ಸಾಮಾನ್ಯ ರೈತನ ದೈನಂದಿನ ಬದುಕಿಗೆ ಯಾವದೇ ರೀತಿಯ ನಿಬರ್ಂಧವಿರುವದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಬಸವನ ದೇವರ ಬನ ಸಂರಕ್ಷಣಾ ಸಮಿತಿಯ ಸಿ.ಪಿ. ಮುತ್ತಣ್ಣ, ಸತ್ಯಶೋಧನಾ ಸಮಿತಿಯ ಚುಮ್ಮಿ ಪೂವಯ್ಯ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಎಂ.ಎನ್. ಚಂದ್ರಮೋಹನ್, ಕೊಡಗು ವನ್ಯಜೀವಿ ಸಂರಕ್ಷಣಾ ಸಮಿತಿಯ ಚೆಪ್ಪುಡೀರ ಶರಿ ಸುಬ್ಬಯ್ಯ, ಕಾವೇರಿ ನದಿ ಸಂರಕ್ಷಣಾ ಸಂಘದ ಪಿ.ಎಸ್. ಅಪ್ಪಯ್ಯ, ಕನ್ನಿ ಕಾವೇರಿ ಟ್ರಸ್ಟ್‍ನ ಸಿ.ಎಂ. ಮುತ್ತಣ್ಣ, ಅಮ್ಮತ್ತಿ ರೈತ ಸಂಘದ ಕೆ.ಯು. ಗಣಪತಿ, ಪಿ.ಬಿ. ಚಂಗಪ್ಪ, ಕೆ.ಪಿ. ಮುದ್ದಯ್ಯ ಇದ್ದರು.