ಶನಿವಾರಸಂತೆ, ಏ. 9: ಶನಿವಾರಸಂತೆಯ ಮಸೀದಿ ಮುಂಭಾಗ ಸಾರ್ವಜನಿಕ ರಸ್ತೆಯ ಬದಿ ನಾಕೂರು ಗ್ರಾಮದ ಎನ್.ಎಸ್. ಪ್ರಕಾಶ್ ನಿಲ್ಲಿಸಿದ್ದ ಕಾರಿಗೆ (ಕೆಎ-46, ಎಂ-1781) ಚಿಕ್ಕಕೊಳತ್ತೂರು ಗ್ರಾಮದ ಉದಯ ಎಂಬ (ಟಿಪ್ಪರ್) ಚಾಲಕ (ಕೆಎ -12 ಬಿ-3200) ತನ್ನ ವಾಹನ ಹಿಂತೆಗೆಯುವಾಗ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಹಿಂದಕ್ಕೆ ಹೋಗಿ ಬದಿಯಲ್ಲಿದ್ದ ಟೆಲಿಫೋನ್ ಕಂಬಕ್ಕೆ ಡಿಕ್ಕಿಯಾಗಿ ನಿಂತುಕೊಂಡಿತು.
ಕಾರಿನ ಚಾಲಕ ಪ್ರಕಾಶ್ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.