ಭಾಗಮಂಡಲ, ಏ. 9: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಕೆದಂಬಾಡಿ ಕಪ್‍ನ ಇಂದಿನ ಪಂದ್ಯದಲ್ಲಿ ದಂಬೆಕೋಡಿ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ.
ಮೇಲ್ಚೆಂಬು ತಂಡವು 6 ವಿಕೆಟ್ ನಷ್ಟಕ್ಕೆ 53 ರನ್ ಬಾರಿಸಿದರೆ ಉತ್ತರವಾಗಿ ಆಡಿದ ದಂಬೆಕೋಡಿ ತಂಡವು 4 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿ ಮುಂದಿನ ಹಂತ ಪ್ರವೇಶಿಸಿದೆ.
ಕುಲ್ಲಚೆಟ್ಟಿರ ತಂಡವು 5 ವಿಕೆಟ್ ಕಳೆದುಕೊಂಡು 30 ರನ್ ಹೊಡೆದರೆ ದೊಡ್ಡೇರ ತಂಡವು 32 ರನ್ ಬಾರಿಸಿ 6 ವಿಕೆಟ್‍ಗಳ ಜಯ ದಾಖಲಿಸಿತು. ಕೊಳಂಬೆ ತಂಡವು 7 ವಿಕೆಟ್‍ಗೆ 48 ರನ್ ಬಾರಿಸಿದರೆ ಮಿತ್ತೂರು ತಂಡವು 2 ವಿಕೆಟ್ ನಷ್ಟಕ್ಕೆ 47 ರನ್ ಹೊಡೆದು 1 ರನ್ ಅಂತರದ ಸೋಲುಂಟಾಯಿತು.
ಕೆದಂಬಾಡಿ ‘ಎ’ ತಂಡವು 4 ವಿಕೆಟ್‍ಗೆ 49 ರನ್ ಗುರಿ ನೀಡಿದರೆ ದೊಡ್ಡೇರ ತಂಡವು 4 ವಿಕೆಟ್‍ಗೆ 53 ರನ್ ಬಾರಿಸಿ ಜಯ ದಾಖಲಿಸಿತು. ಕೇಚಪ್ಪನ ತಂಡವು 2 ವಿಕೆಟ್‍ಗೆ 58 ರನ್ ಬಾರಿಸಿದರೆ ಪಾಂಡಿರ ತಂಡವು 50 ರನ್ ಬಾರಿಸಿ 8 ರನ್‍ಗಳ ಅಂತರದಿಂದ ಸೋತಿತು.
ದಂಬೆಕೋಡಿ 3 ವಿಕೆಟ್‍ಗೆ 63 ರನ್ ಹೊಡೆದರೆ ಕರಕರನ ತಂಡವು 4 ವಿಕೆಟ್‍ಗೆ 50 ರನ್ ಬಾರಿಸಿ ಸೋಲನುಭವಿಸಿತು. ಕೊಳಂಬೆ ತಂಡ 8 ವಿಕೆಟ್‍ಗೆ 36 ರನ್ ಹೊಡೆದರೆ ದೊಡ್ಡೇರ ತಂಡ 1 ವಿಕೆಟ್‍ಗೆ 37 ರನ್ ಬಾರಿಸಿ 10 ವಿಕೆಟ್‍ಗಳ ಜಯ ದಾಖಲಿಸಿತು.
ಮೇಲ್ಚೆಂಬು 3 ವಿಕೆಟ್‍ಗೆ 59 ರನ್ ಬಾರಿಸಿದರೆ ಉತ್ತರವಾಗಿ ಆಡಿದ ಕೇಚಪ್ಪನ ತಂಡವು 6 ವಿಕೆಟ್ ಕಳೆದುಕೊಂಡು 43 ರನ್ ಬಾರಿಸಿ ಸೋಲನುಭವಿಸಿತು.