ನಾಪೆÇೀಕ್ಲು, ಏ. 9: ಇತ್ತೀಚೆಗೆ ಕೇರಳ ರಾಜ್ಯ ಕಾಸರಗೋಡು ಬಳಿ ದುಷ್ಕರ್ಮಿಗಳಿಂದ ಹತ್ಯೆಯಾದ ಹೊದವಾಡ ಗ್ರಾಮದ ರಿಯಾಜ್ ಮುಸ್ಲಿಯಾರ್ ಮನೆಗೆ ಜೆಡಿಎಸ್ ನಾಯಕ, ಮಾಜಿ ಶಾಸಕ ಜೀವಿಜಯ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭ ಅವರು ಕೇರಳ ರಾಜ್ಯದ ಜೆಡಿಎಸ್ ಸಚಿವ ತೋಮಸ್, ಶಾಸಕ ನಾಣು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕೇರಳ ಸರಕಾರದಿಂದ ಶೀಘ್ರ ಪರಿಹಾರ ದೊರಕಿಸುವದು, ಸೂಕ್ತ ತನಿಖೆ ನಡೆಸುವ ಬಗ್ಗೆ ಒತ್ತಾಯಿಸಿದರು. ಈ ಬಗ್ಗೆ ಬೆಂಗಳೂರಿಗೆ ತೆರಳಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೂ ತರಲಾಗುವದು ಎಂದು ಭರವಸೆ ನೀಡಿದರು.
ಈ ಸಂದರ್ಭ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಮನ್ಸೂರ್ ಅಲಿ, ವಕೀಲ ಮನೋಜ್ ಬೋಪಯ್ಯ, ಮತೀನ್ ನಾಸಿರ್, ರಾಜೇಶ್ ಎಲ್ಲಪ್ಪ, ಎ.ಎಂ.ಮಹಮ್ಮದ್, ಸುಲೈಮಾನ್, ಮೃತ ರಿಯಾಜ್ ತಂದೆ ಸುಲೈಮಾನ್ ಇದ್ದರು.