ನಾಪೆÇೀಕ್ಲು, ಏ. 10 : ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಕಸ್ತೂರಿ ರಂಗನ್ ವರದಿಯ ಸಾಧಕ - ಬಾಧಕಗಳ ಬಗ್ಗೆ ಚರ್ಚಿಸಿ ಸರಕಾರಕ್ಕೆ ವರದಿ ಸಲ್ಲಿಸಲು ತಾ. 10 ರಂದು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸಭೆಯನ್ನು ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಹಾಜರಿದ್ದ ನೋಡಲ್ ಅಧಿಕಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಸ್ತೂರಿ ರಂಗನ್ ವರದಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದ ಕಾರಣ ಸಭೆಯನ್ನು ಮುಂದೂಡಿದ ಪ್ರಸಂಗ ನಡೆದಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ಮಾತನಾಡಿದ ಕುಲ್ಲೇಟಿರ ಅಜಿತ್ ನಾಣಯ್ಯ ಕಸ್ತೂರಿ ರಂಗನ್ ವರದಿಯ ಕುರಿತು ತಮಗೆ ವಿವರ ಇದೆಯೇ? ಎಂದು ಪ್ರಶ್ನಿಸಿದಾಗ ಗ್ರಾಮ ಪಂಚಾಯಿತಿ ಪಿಡಿಓ ಕೇಶವ ಅವರು ನಮಗೆ ಜಿಲ್ಲಾಧಿಕಾರಿಗಳಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು. ನಂತರ ಕಂಗಾಂಡ ಜಾಲಿ ಪೂವಪ್ಪ, ಬಿದ್ದಾಟಂಡ ಜಿನ್ನು ನಾಣಯ್ಯ ನೋಡಲ್ ಅಧಿಕಾರಿ ದಮಯಂತಿ ಅವರನ್ನು ಸಭೆಯಲ್ಲಿ ವಿವರಣೆ ನೀಡುವಂತೆ ಕೋರಿದರು. ಅವರು ಕಸ್ತೂರಿ ರಂಗನ್ ವರದಿಯ ಬಗ್ಗೆ ನಡೆದ ಸಭೆಯ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಲು ಆಗಮಿಸಿರುವದಾಗಿ ತಿಳಿಸಿದರು.

ಸಭೆಯಲ್ಲಿ ಗ್ರಾಮಸ್ಥರಾದ ಉದಯ ಶಂಕರ್, ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್ ಮಾತನಾಡಿ ಇದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದುದರಿಂದ ವರದಿ ಬಗ್ಗೆ ಸಂಪೂರ್ಣ ಅರಿತು ಸಭೆ ಕರೆಯುವಂತೆ ತಿಳಿಸಿದರು. ಕೊನೆಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಸಭೆಯನ್ನು ಮುಂದೂಡಿರುವದಾಗಿ ಘೋಷಿಸಿದರು

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ತಿಮ್ಮಯ್ಯ, ಸದಸ್ಯರಾದ ಪಿ.ಎಂ. ರಷೀದ್, ಕುಲ್ಲೇಟಿರ ಜ್ಯೋತಿ ನಾಚಪ್ಪ, ಚೀಯಕಪೂವಂಡ ಮುತ್ತುರಾಣಿ ಅಚ್ಚಪ್ಪ, ಪಿ.ಸಿ.ಅಕ್ಕಮ್ಮ, ಮೋಹಿನಿ, ಬೊಟ್ಟೋಳಂಡ ಚಿತ್ರ, ವನಜಾಕ್ಷಿ, ಶಹನಾಜ್, ಚೋಕಿರ ರೋಷನ್, ಪುಷ್ಪ ಕೃಷ್ಣಪ್ಪ, ಟಿ.ಎ. ಮಹಮ್ಮದ್, ಮಹಮ್ಮದ್ ಖುರೇಸಿ, ಗ್ರಾಮಸ್ಥರಾದ ಕುಲ್ಲೇಟಿರ ಅರುಣ್ ಬೇಬ, ನೂರಂಬಡ ರವೀಂದ್ರ, ಕೋಟೆರ ಮಂದಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದೇವಕ್ಕಿ ಮತ್ತಿತರರು ಇದ್ದರು.