ಭಾಗಮಂಡಲ, ಏ. 9: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಯ ಕೆದಂಬಾಡಿ ಕಪ್‍ನ ಇಂದಿನ ಪಂದ್ಯದಲ್ಲಿ ಬಿಳಿಯಂಡ್ರ, ತೊತ್ಯನ ಹಾಗೂ ಕುಂಬಳಚೇರಿ ತಂಡಗಳು ಮುನ್ನಡೆ ಸಾಧಿಸಿ ಮುಂದಿನ ಹಂತ ಪ್ರವೇಶಿಸಿವೆ.

ದೇವಾಯಿರ ತಂಡವು 6 ವಿಕೆಟ್ ನಷ್ಟಕ್ಕೆ 51 ರನ್ ಬಾರಿಸಿದರೆ ಉತ್ತರವಾಗಿ ಆಡಿದ ಕಕ್ಕಚೇಳು ತಂಡವು 2 ವಿಕೆಟ್ ಕಳೆದುಕೊಂಡು 55 ರನ್ ಬಾರಿಸಿ ಜಯ ದಾಖಲಿಸಿತು.

ಪಾರೆಮಜಲು ತಂಡವು 5 ವಿಕೆಟ್‍ಗೆ 136 ರನ್ ಬಾರಿಸಿದರೆ ದೇವಂಗೋಡಿ ತಂಡವು 8 ವಿಕೆಟ್ ಕಳೆದುಕೊಂಡು 15 ರನ್ ಬಾರಿಸಲಷ್ಟೇ ಶಕ್ತವಾಗಿ 111 ರನ್‍ಗಳ ಸೋಲನುಭವಿಸಿತು. ಅಯ್ಯೆಟ್ಟಿ ತಂಡವು 5 ವಿಕೆಟ್‍ಗೆ 59 ರನ್ ಗಳಿಸಿದರೆ ಕುಟ್ಟನ ತಂಡವು 6 ವಿಕೆಟ್‍ಗೆ 26 ರನ್ ಗಳಿಸಿ ಸೋತಿತು.

ಬಿಳಿಯಂಡ್ರ 2 ವಿಕೆಟ್‍ಗೆ 64 ರನ್ ಗಳಿಸಿದರೆ ಪೂಜಾರಿರ 20 ರನ್‍ಗೆ ಆಲೌಟಾಯಿತು. ಪುದಿಯನೆರವನ 8 ವಿಕೆಟ್‍ಗೆ 29 ರನ್ ಬಾರಿಸಿದರೆ ಬಿಳಿಯಂಡ್ರ 3 ವಿಕೆಟ್‍ಗೆ 30 ರನ್ ಗಳಿಸಿ ಜಯ ದಾಖಲಿಸಿತು.

ಪಾರೆಕುಂಜಿಲನ 6 ವಿಕೆಟ್‍ಗೆ 84 ರನ್ ಬಾರಿಸಿದರೆ ಪರಿಚನ 8 ವಿಕೆಟ್‍ಗೆ 26 ರನ್ ಗಳಿಸಿ ಸೋತಿತು. ದಿನದ ರೋಜಕ ಪಂದ್ಯವು ನೆರಿಯನ ಹಾಗೂ ಕುಯ್ಯಮುಡಿ ತಂಡಗಳ ನಡುವೆ ನಡೆಯಿತು. ಕುಯ್ಯಮುಡಿ 5 ವಿಕೆಟ್‍ಗೆ 42 ರನ್‍ಗಳ ಗುರಿ ನೀಡಿದರೆ ನೆರಿಯನ ತಂಡವು 5 ವಿಕೆಟ್‍ಗೆ 42 ರನ್ ಬಾರಿಸಿ ಸಮಬಲ ಸಾಧಿಸಿತು. ಈ ಹಂತದಲ್ಲಿ ಸೂಪರ್ ಓವರ್ ನೀಡಿದರೂ ಮತ್ತೆ ಪಂದ್ಯ ಡ್ರಾ ಆಯಿತು. ಎರಡನೇ ಸೂಪರ್ ಓವರ್‍ನಲ್ಲಿ 1 ರನ್‍ಗೆ ಮೂರು ವಿಕೆಟ್ ಗಳಿಸಿದ ಕುಯ್ಯಮುಡಿ ತಂಡವು ಜಯ ದಾಖಲಿಸಿತು.

ಎಡಿಕೇರಿ 6 ವಿಕೆಟ್‍ಗೆ 79 ರನ್ ಬಾರಿಸಿದರೆ ಅಮ್ಮವ್ವನ 38 ರನ್ ಗಳಿಸಿ ಸೋಲನುಭವಿಸಿತು. ಕುಯ್ಯಮುಡಿ 5 ವಿಕೆಟ್‍ಗೆ 52 ರನ್ ಬಾರಿಸಿದರೆ ಕುಂಬಳಚೇರಿ 4 ವಿಕೆಟ್ ಗುರಿ ಸಾಧಿಸಿ 6 ವಿಕೆಟ್‍ಗಳ ಜಯ ದಾಖಲಿಸಿತು. ಮತ್ತೊಂದು ಪಂದ್ಯದಲ್ಲಿ ಕುಂಬಳಚೇರಿ 6 ವಿಕೆಟ್‍ಗೆ 46 ರನ್ ಬಾರಿಸಿದರೆ ಎಡಿಕೇರಿ 3 ವಿಕೆಟ್‍ಗೆ 27 ರನ್ ಬಾರಿಸಿ ಸೋತಿತು.

ಪಾರೆಕುಂಜಿಲ 6 ವಿಕೆಟ್‍ಗೆ 34 ರನ್ ದಾಖಲಿಸಿದರೆ ಬಿಳಿಯಂಡ್ರ 2 ವಿಕೆಟ್‍ಗೆ ಗುರಿ ಸಾಧಿಸಿ 8 ವಿಕೆಟ್‍ಗಳ ಜಯ ದಾಖಲಿಸಿತು. ನಡುವಟ್ಟಿರ 42 ರನ್ ಗುರಿ ನೀಡಿದರೆ ಉತ್ತರವಾಗಿ ಆಡಿದ ತೊತ್ಯನ ತಂಡವು 5 ವಿಕೆಟ್‍ಗೆ ಗುರಿ ಸಾಧಿಸಿ ಜಯ ಪಡೆಯಿತು.