ಮಡಿಕೇರಿ, ಏ. 10: ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ ಪ್ರಕಾರ ಕೊಡಗು ಜಿಲ್ಲೆಯ 217 ಮದ್ಯ ವಹಿವಾಟು ಕೇಂದ್ರಗಳ ಪೈಕಿ, ಮುಂದಿನ ಜೂನ್ ವೇಳೆಗೆ 145 ಮಳಿಗೆಗಳು ಸ್ಥಳಾಂತರಗೊಳ್ಳಬೇಕಿದೆ. ಈ ಆದೇಶವು ಕಟ್ಟುನಿಟ್ಟಿನಿಂದ ಜಾರಿಗೊಂಡರೆ ಕೊಡಗಿನ ಹೆದ್ದಾಗಿ ಬಳಿ ಇರುವ ಕೇಂದ್ರಗಳಲ್ಲಿ 220 ಮೀ. ವ್ಯಾಪ್ತಿಯಿಂದ ಕೇವಲ 72 ವಹಿವಾಟು ಘಟಕಗಳು ಮಾತ್ರ ಉಳಿಯಲಿವೆ.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ವ್ಯಾಪ್ತಿಯಲ್ಲಿ ಪ್ರಸಕ್ತ ಅಬ್ಕಾರಿ ಇಲಾಖೆಯಿಂದ ಅನುಮತಿ ಹೊಂದಿರುವ 19 ಸಿಎಲ್-2 ಮಳಿಗೆಗಳಲ್ಲಿ 3 ಹೆದ್ದಾರಿ ವ್ಯಾಪ್ತಿಗೆ ಒಳಪಟ್ಟಿವೆ. ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 26 ರಲ್ಲಿ 20 ಮಳಿಗೆಗಳು ಸ್ಥಳಾಂತರಗೊಳ್ಳಬೇಕಿದೆ.ವೀರಾಜಪೇಟೆ ತಾಲೂಕಿನಲ್ಲಿ 41ರಲ್ಲಿ 39 ಬೇರೆಡೆಗೆ ತೆರವುಗೊಳಿಸಬೇಕಿದ್ದು, ಮೂರು ತಾಲೂಕುಗಳಲ್ಲಿ ಕೂಡ 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯಿರುವ 220 ಮೀ. ವ್ಯಾಪ್ತಿಯ ಸನ್ನದ್ದುಗಳಿಗೆ ನ್ಯಾಯಾಲಯ ಆದೇಶ ಅನ್ವಯಿಸಲಿವೆ. ಇನ್ನು ಸಿ.ಎಲ್.-4 ಮದ್ಯವಹಿವಾಟು ಕೇಂದ್ರಗಳಲ್ಲಿ ಸನ್ನದ್ದು ಶುಲ್ಕ ಹೊಂದಿರುವ ಒಟ್ಟು 18 ರಲ್ಲಿ, 7 ಮದ್ಯ ವಹಿವಾಟು ಮಳಿಗೆಗಳು ಸ್ಥಳಾಂತರಗೊಳ್ಳಬೇಕಿದೆ. ಇವುಗಳಲ್ಲಿ ಮಡಿಕೇರಿಯ ಹೊರತಾಗಿ ವೀರಾಜಪೇಟೆಯಲ್ಲಿ 5 ಇದ್ದು, ಸೋಮವಾರಪೇಟೆ ತಾಲೂಕಿನ 2 ಸ್ಥಳಾಂತರಿಸಬೇಕಿದೆ. ಮಡಿಕೇರಿಯ ಮೂರು ಕೂಡ ಜನಸಂಖ್ಯೆ ಆದರಿಸಿ ಉಳಿದುಕೊಳ್ಳಲಿವೆ.
ಜಿಲ್ಲೆಯಲ್ಲಿರುವ ಸಿಎಲ್ ‘6-ಎ’ ಮದ್ಯ ವಹಿವಾಟು ಕೇಂದ್ರಗಳಲ್ಲಿ ಮಡಿಕೇರಿ 2 ಹಾಗೂ ವೀರಾಜಪೇಟೆಯಲ್ಲಿ 1 ಇದ್ದು ಇವು ಸರ್ವೋಚ್ಛ ನ್ಯಾಯಾಲಯ ಆದೇಶದಿಂದ ಹೊರತಾಗಿವೆ. ಕೊಡಗಿನಲ್ಲಿರುವ ಸಿಎಲ್ - 7 ರಲ್ಲಿ ಒಟ್ಟು 33 ಮದ್ಯ ಮಾರಾಟ ಮಳಿಗೆಗಳಲ್ಲಿ 18 ಸ್ಥಳಾಂತರಗೊಳ್ಳಲಿದ್ದು, 15 ಮಾತ್ರ 220 ಮೀ. ವ್ಯಾಪ್ತಿಯಿಂದ ಹೊರಗುಳಿಯಲಿವೆ. ಜಿಲ್ಲೆಯ ಪಟ್ಟಿಗೆ ಸಿಎಲ್-‘7 ಎ’, ಸಿ.ಎಲ್-‘7ಬಿ,’ ಸಿಎಲ್-‘7 ಡಿ’ ಹೆದ್ದಾರಿ ಬದಿ ಕಾರ್ಯನಿರ್ವಹಿಸುತ್ತಿಲ್ಲ.
ಮುಂದುವರಿದು ಜಿಲ್ಲೆಯ 66 ಸಿ.ಎಲ್-9
220 ಮೀ. ವ್ಯಾಪ್ತಿಗೆ ಜಿಲ್ಲೆಯ 145 ಮದ್ಯ ಕೇಂದ್ರಗಳು
(ಮೊದಲ ಪುಟದಿಂದ) ಮಳಿಗೆಗಳಲ್ಲಿ 220 ಮೀ. ವ್ಯಾಪ್ತಿಗೆ 50 ಒಳಪಡಲಿದ್ದು, ಕೇವಲ 16 ಮಾತ್ರ ಹೊರಗುಳಿಯಲಿವೆ. ಇದರೊಂದಿಗೆ ಸಿಎಲ್-11 ಕೇಂದ್ರಗಳು ಸೋಮವಾರಪೇಟೆ ಹಾಗೂ ವೀರಾಜಪೇಟೆಯಲ್ಲಿ ತಲಾ 1 ರಂತೆ ಇದು 2 ಕೂಡ ಬೇರೆಡೆ ಸ್ಥಳಾಂತರಿಸಬೇಕಿದೆ.
ಮಿಕ್ಕಂತೆ ಸಿಎಲ್ ‘11-ಸಿ’ ಕೇಂದ್ರಗಳು ಒಟ್ಟು 8 ಇವೆ. ಇವುಗಳಲ್ಲಿ ಜಿಲ್ಲಾ ಕೇಂದ್ರ 1, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕುಗಳಲ್ಲಿ ತಲಾ 2 ರಂತೆ ಒಟ್ಟು 5ನ್ನು ಬೇರೆಡೆಗೆ ಕೊಂಡೊಯ್ಯಬೇಕಿದೆ. ಅಬ್ಕಾರಿ ಇಲಾಖೆ ವ್ಯಾಪ್ತಿಯಲ್ಲಿ ಆರ್‍ವಿಬಿ 1 ಸೋಮವಾರಪೇಟೆ ತಾಲೂಕಿನಲ್ಲಿದ್ದು, ಅದು ಕೂಡ ಜನಸಂಖ್ಯೆಯಲ್ಲಿ ಬದಲಾವಣೆಗೊಳ್ಳಬೇಕಿದೆ. ಹೀಗೆ ಒಟ್ಟು 145 ಅಬ್ಕಾರಿ ವಹಿವಾಟು ಘಟಕಗಳು 220 ಮೀ. ನಿಂದ ಸ್ಥಳಾಂತರಗೊಳ್ಳಬೇಕಿದ್ದು, ಜೂನ್ ತನಕ ನ್ಯಾಯಾಲಯ ಕಾಲಾವಕಾಶ ಕಲ್ಪಿಸಿದೆ.