ಸೋಮವಾರಪೇಟೆ,ಏ.10: ಕಕ್ಕೆಹೊಳೆ ಸಮೀಪದಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ವಿಗ್ರಹ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ. 11 ಮತ್ತು 12ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ತಿಳಿಸಿದ್ದಾರೆ.

ತಾ. 11ರ ಸಂಜೆ 6 ಗಂಟೆಯಿಂದ ಶ್ರೀ ಮುತ್ತಪ್ಪಸ್ವಾಮಿ ದೇವಾಲಯ ಆವರಣದಲ್ಲಿರುವ ದೈವಗಳಿಗೆ ವಿಶೇಷ ಪೂಜೆಗಳು ನಡೆಯಲಿದೆ. ತಾ.12ರಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಆವರಣದಲ್ಲಿ ಗಣಪತಿ ಹೋಮ ನಡೆಯಲಿದೆ. ನಂತರ ಭುವನೇಶ್ವರಿ, ಅಯ್ಯಪ್ಪಸ್ವಾಮಿ, ಗಣಪತಿ, ನಾಗ ದೇವತೆಗಳು ಸೇರಿದಂತೆ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಭಗವತಿ, ರಕ್ತಚಾಮುಂಡಿ, ಕರಿಂಗುಟ್ಟಿ ಶಾಸ್ತವು, ಕಂಡಕರ್ಣ, ಪೊಟ್ಟನ್, ಗುಳಿಗ ದೈವಗಳ ಗುಡಿಯ ಕಳಶಾಭಿಷೇಕ ನೆರವೇರಲಿದೆ.

ದೇವಾಲಯದ ಗುಡಿಗಳಲ್ಲಿ ವಿಶೇಷ ಪೂಜೆ ನಡೆದು ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ. ಪೂಜಾ ಕೈಂಕರ್ಯಗಳು ಕೇರಳ ಕಾಳೇಘಾಟ್‍ನ ಶ್ರೀ ನಾರಾಯಣನ್ ತಂತ್ರಿಗಳ ನೇತೃತ್ವದಲ್ಲಿ ಅರ್ಚಕರುಗಳಾದ ಕೃಷ್ಣ, ನಾರಾಯಣನ್ ಹಾಗೂ ದೇವಾಲಯಗಳ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ, ಬಿ.ಕೆ. ಗೋಪಾಲ್‍ರವರ ಸಹಕಾರದೊಂದಿಗೆ ನಡೆಯಲಿದೆ ಎಂದು ವಿನೋದ್ ತಿಳಿಸಿದ್ದಾರೆ.