*ನಾಪೆÉÇೀಕ್ಲು, ಏ. 10: ಗ್ರಾ.ಪಂ.ಯಿಂದ ಹರಾಜದ ಮಾರುಕಟ್ಟೆ ವ್ಯಾಪಾರಿಗಳಿಗೆ ಅಧಿಕ ಸುಂಕ ವಸುಲಿ ಮಾಡುತ್ತಿದ್ದಾರೆ ಎಂದು ಪ್ರತಿಭಟಿಸಿ, ಕಾವೇರಿ ಸೇನೆ ಮತ್ತು ಮಾರುಕಟ್ಟೆ ವ್ಯಾಪಾರಿಗಳು ವ್ಯಾಪಾರ ಸ್ಥಗಿತ ಗೊಳಿಸಿ ತಾ, 10 ರಂದು ಮಾರುಕಟ್ಟೆ ಬಳಿಯಿಂದ ಮೌನ ಮೆರವಣಿಗೆ ನಡೆಸಿ ಗ್ರಾ.ಪಂ.ಗೆ ಮುತ್ತಿಗೆ ಹಾಕಿದರು.

ಪಂಚಾಯಿತಿ ಸಭಾಂಗಣಕ್ಕೆ ನುಗ್ಗಿದ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಸುಂಕ ಕಡಿಮೆಗೊಳಿಸುವಂತೆ ಒತ್ತಾಯಿಸಿದರು. ಈ ಸಂದರ್ಭ ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಅಧಿಕ ಶುಲ್ಕ ವಸೂಲಾತಿ ಬಗ್ಗೆ ಮಾತನಾಡಿ ಶುಲ್ಕ ಕಡಿಮೆ ಗೊಳಿಸಲು ಕೋರಿದರು. ಪಿಡಿಓ ಮತ್ತು ಅಧ್ಯಕ್ಷರು ಪಂಚಾಯಿತಿ ಕಾನೂನಿನ ಅಡಿಯಲ್ಲಿ ನಿಬಂಧನೆಗೆ ಒಳಪಟ್ಟಂತೆ ಮಾರುಕಟ್ಟೆ ಹರಾಜು ಸಂದರ್ಭ ಶುಲ್ಕವನ್ನು ವಸೂಲಿ ಮಾಡಲು ದರವನ್ನು ನಿಗದಿಗೊಳಿಸಿದ್ದು ಅದರಂತೆ ಮಾರುಕಟ್ಟೆಯಲ್ಲಿ ಸುಂಕ ವಸೂಲಾತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಹೆಚ್ಚಿನ ಸÀುಂಕ ವಸೂಲಿ ಮಾಡಿz್ದÀರೆ ಅಂಗಡಿಯವರು ಗ್ರಾಮ ಪಂಚಾಯಿತಿಗೆ ಲಿಖಿತ ಅರ್ಜಿ ಸಲ್ಲಿಸಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವದು ಎಂದರು.

ರಸ್ತೆ ಬದಿಯ ವ್ಯಾಪಾರಸ್ಥರನ್ನು ತೆರವುಗೊಳಿಸಬಾರದೆಂದು ಇದಕ್ಕೆ ಸುಪ್ರೀಂ ಕೋರ್ಟ್ ಆದೇಶವಿದೆÀ ಎಂದು ರವಿ ಚಂಗಪ್ಪ ಹೇಳಿದಾಗ, ಕೆರಳಿದ ಗ್ರಾಮಸ್ಥ ಜಿನ್ನು ನಾಣಯ್ಯ ಆದೇಶವನ್ನು ತೋರಿಸಿ ಎಂದಾಗ ಮಾತಿನ ಚಕಮುಕಿ ನಡೆದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದಿಯಾಗಿ ಸದಸ್ಯರು ಇವರು ಯಾವದೆ ಮಾಹಿತಿ ಇಲ್ಲದೆ ಗ್ರಾಮ ಪಂಚಾಯತ್ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿದ್ದು ಇವರ ಮೇಲೆ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಬೇಕೆಂದು ಮತ್ತು ಇವರನ್ನು ಸಭಾಂಗಣದಿಂದ ಹೊರ ಕಳುಹಿಸು ವಂತೆ ಪೋಲಿಸರಿಗೆ ಹೇಳಿದ ಮೇರೆ ನಾಪೆÇೀಕ್ಲು ಪೋಲಿಸರು ಸಭಾಂಗಣ ದಿಂದ ಎಲ್ಲರನ್ನು ಹೊರ ಕಳುಹಿಸು ವಲ್ಲಿ ಯಾಶಸ್ವಿಯಾದರು. ಇದರಿಂದ ಕಾವೇರಿ ಸೇನೆಯ ಪ್ರತಿಭಟನೆಗೆ ಹಿನ್ನಡೆಯುಂಟಾಗಿದೆ. -ದುಗ್ಗಳ