ಮಡಿಕೇರಿ,ಏ.10; ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ನಡೆಯಲಿರುವ ಪೈಕೇರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಬಾರಿ 195 ಕುಟುಂಬ ತಂಡಗಳು ಭಾಗವಿಹಿಸಿವೆ. ಕೊನೆಯ ದಿನವಾದ ಇಂದು ಒಟ್ಟು 195 ತಂಡಗಳು ನೋಂದಾಯಿಸಿಕೊಂಡಿದ್ದು, ಇದು ಈ ವರೆಗಿನ ಪಂದ್ಯಾವಳಿಗಳ ಪೈಕಿ ಅತಿ ಹೆಚ್ಚು ನೋಂದಣಿಯಾಗಿದೆ. ಕಳೆದ ಬಾರಿ 180 ತಂಡಗಳು ಭಾಗವಹಿಸಿದ್ದವು.
ತಾ.11 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಕೆಳಗಿನ ಗೌಡ ಸಮಾಜದ ಎಲ್ಲ ಕುಟುಂಬ ತಂಡಗಳ ನಾಯಕ, ವ್ಯವಸ್ಥಾಪಕರ ಸಮ್ಮುಖದಲ್ಲಿ ಪಂದ್ಯಾವಳಿಯ ಟೈಸ್ ಡ್ರಾ ಮಾಡಲಾಗುವದೆಂದು ಯುವ ವೇದಿಕೆ ಕಾರ್ಯದರ್ಶಿ ಕಟ್ಟೆಮನೆ ರೋಶನ್ ತಿಳಿಸಿದ್ದಾರೆ.