ವೀರಾಜಪೇm,É ಏ.10: ವೀರಾಜಪೇಟೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಪರಿವರ್ತಿಸಿ ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸಲಾಗುವದು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಭರವಸೆ ನೀಡಿದರು.ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರೀಶಿಲನೆ ನಡೆಸಿದರು. ಪ್ರಾರಂಭದಲ್ಲಿ ಹಿರಿಯ ಸದಸ್ಯ ಮೈನುದ್ದಿನ್ ಮಾತನಾಡಿ ಜಿಲ್ಲೆಯ ಜನಸಂಖ್ಯೆಯಲ್ಲಿ ವಿರಾಜಪೇಟೆ ಪಟ್ಟಣ 2ನೇ ಸ್ಥಾನದಲ್ಲಿದೆ. ಪುರಸಭೆಯನ್ನಾಗಿ ಮಾರ್ಪಡಿಸುವ ಪ್ರಯತ್ನ ನಡೆಯುತ್ತಿದೆ. ಎಂದು ಸಭೆಗೆ ತಿಳಿಸಿದಾಗ ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಂಡು ಕಡತವನ್ನು ಸರ್ಕಾರಕ್ಕೆ ಕಳುಹಿಸಿಕೊಡಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥ ಮಾಡುವದಾಗಿ ವೀಣಾ ಅಚ್ಚಯ್ಯ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಮಾಜಿ ಅಧ್ಯಕ್ಷೆ ಮನಿಯಪಂಡ ದೇಚಮ್ಮ ಮಾತನಾಡಿ ಪಟ್ಟಣದ ಅರಸು ನಗರದಲ್ಲಿರುವ ಪುರಾತನ ಕಾಲದ ನೀರಿನ ಟ್ಯಾಂಕ್ ನಿರಂತರ ಸೋರಿಕೆಯಾಗುತ್ತಿದ್ದು ನೀರು ಹರಿದು ಹೋಗುತ್ತಿದೆ. ಎಷ್ಟೋ ಮನೆಗಳಿಗೆ ಸರಬರಾಜು ಆಗಬೇಕಾಗಿದ್ದ ನಲ್ಲಿ ನೀರು ವ್ಯರ್ಥವಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಟ್ಯಾಂಕನ್ನು ದುರಸ್ತಿ ಪಡಿಸಿ ಮೇಲ್ದರ್ಜೆಗೆ ಏರಿಸಿದರೆ ಬಹುತೇಕ ಕುಟುಂಬಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದು ಹೇಳಿದಾಗ ಅಭಿಯಂತರರ ಬಳಿ ಮಾಹಿತಿ ಪಡೆದು ಅಂದಾಜು ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟರೆ

(ಮೊದಲ ಪುಟದಿಂದ) ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು. ಸದಸ್ಯ ಮತೀನ್ ಹಾಗೂ ರಾಫಿ ಮಾತನಾಡಿ ಪಟ್ಟಣದಲ್ಲಿ ಮೂರು ದಿನಗಳಿಗೊಮ್ಮೆ ನೀರು ಬರುತ್ತಿದೆ. ಕುಡಿಯುವ ನೀರಿನ ಸಮಸ್ಯೆಯಿದೆ. ಹಳೆಯ ಪೈಪುಗಳನ್ನು ಬದಲಾಯಿಸಿ ಹೆಚ್ಚಿನ ಸಾಮಥ್ರ್ಯದ ಪೈಪುಗಳನ್ನು ಅಳವಡಿಸುವಂತೆ ಸಭೆಗೆ ತಿಳಿಸಿದರು. ಆಗ ಯಾರಿಗೂ ನೀರು ಬೇಡ ರಸ್ತೆ ಅಭಿವೃದ್ಧಿ ಮಾಡಿಕೊಂಡಿರಿ ಎಂದು ಮತೀನ್ ಆಕ್ರೋಶಗೊಂಡು ಏರು ಧ್ವನಿಯಲ್ಲಿ ಸಭೆಗೆ ತಿಳಿಸಿದಾಗ ಮಧ್ಯ ಪ್ರವೇಶಿಸಿದ ವೀಣಾ ಅಚ್ಚಯ್ಯ ಅವರು ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಅವರಲ್ಲಿ ಮಾಹಿತಿ ಬಯಸಿದರು. 2002 ರಲ್ಲಿ ಬೇತ್ರಿ ಯೋಜನೆಗೆ ಚಾಲನೆ ನೀಡಲಾಗಿದೆ. 24 ಗಂಟೆ ಮೋಟಾರು ಚಾಲು ಮಾಡುವದರಿಂದ ಮೋಟಾರಿನ ಸಾವiರ್ಥ್ಯ ಕಡಿಮೆಯಾಗಿ ಶೇ 50ರಷ್ಟು ಮಾತ್ರ ನೀರು ಪಟ್ಟಣಕ್ಕೆ ಬರುತ್ತಿದೆ ಎಂದು ಹೇಳಿದರು. ಸರ್ವ ಸದಸ್ಯರ ಸಭೆ ಕರೆದು ಯೋಜನಾ ವರದಿಯನ್ನು ತಯಾರಿಸಿ ಕಳಿಸಿ ಕೊಡುವಂತೆ ವೀಣಾ ಅಚ್ಚಯ್ಯ ಆದೇಶಿಸಿದರು.

ಕಳೆದ ಬಾರಿ ಜಿಲ್ಲೆಗೆ ನೀಡಿರುವ ರೂ. 50 ಕೋಟಿ ಅನುದಾನದಲ್ಲಿ 5 ಕೋಟಿಯನ್ನು ಕುಶಾಲನಗರ ಪಟ್ಟಣ ಪಂಚಾಯಿತಿಗೆ ಅಭಿವೃದ್ದಿಗಾಗಿ ನೀಡಲಾಗಿದೆ. ಈ ಬಾರಿ ಜಿಲ್ಲೆಗೆ ನೀಡಿರುವ ರೂ. 50 ಕೋಟಿಯಲ್ಲಿ 5 ಕೋಟಿಯನ್ನು ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ನೀಡಿ ಎಂದು ಸದಸ್ಯ ಮತೀನ್ ಸಭೆಗೆ ತಿಳಿಸಿ ಒತ್ತಡ ಹೇರಿದಾಗ ಇದಕ್ಕೆ ವೀಣಾ ಸಮ್ಮತಿಸಿದರು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸ್‍ರೆ, ಸ್ಕ್ಯಾನಿಂಗ್ ಯಂತ್ರೋಪಕರಣಗಳಿದ್ದು ಸಿಬ್ಬಂದಿಗಳಿಲ್ಲ. ಅನೇಕ ಕಿಡ್ನಿ ವೈಫಲ್ಯಗೊಂಡಿರುವ ಅನೇಕ ರೋಗಿಗಳಿಗೆ ಯಾವದೇ ಸೌಲಭ್ಯವಿಲ್ಲದಂತಾಗಿದೆ. ಡಯಾಲಿಸಿಸ್‍ಗಾಗಿ ಮಡಿಕೇರಿಗೆ ತೆರಳಬೇಕಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್ ಸೌಲಭ್ಯ ಅಗತ್ಯವಾಗಿದೆ ಎಂದು ಸದಸ್ಯ ರಾಫಿ ಸಭೆಯಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್, ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ. ಸುನೀತಾ, ಅಭಿಯಂತರ ಎನ್.ಪಿ.ಹೇಮ್ ಕುಮಾರ್, ಸಿಬ್ಬಂದಿಗಳು ಉಪಸ್ಥಿತರಿದ್ದರು.