ಮಡಿಕೇರಿ, ಏ. 11: ಕೊಡವ ಕುಟುಂಬಗಳ ನಡುವೆ ಬಾಳಲೆಯಲ್ಲಿ ಈ ಬಾರಿ ನಡೆಯಲಿರುವ ಅಳಮೇಂಗಡ ಕಪ್ ಕ್ರಿಕೆಟ್ ಪಂದ್ಯಾವಳಿಗೆ ತಾ. 11ರ ತನಕ 215 ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ತಾ 12 ರಂದು (ಇಂದು) ಟೈಸ್ ಡ್ರಾ ಮಾಡಲಾಗುತ್ತಿದ್ದು, ತಂಡಗಳ ಸಂಖ್ಯೆ ನಿಖರವಾಗಿ ಈ ದಿನ ನಿರ್ಧಾರವಾಗಲಿದೆ ಎಂದು ಕ್ರಿಕೆಟ್ ಉತ್ಸವ ಸಮಿತಿ ಪ್ರಮುಖ ಅಳಮೇಂಗಡ ಬೋಸ್ ಮಂದಣ್ಣ ತಿಳಿಸಿದ್ದಾರೆ.