ಮಡಿಕೇರಿ, ಏ. 11: ಮೂರ್ನಾಡಿನ ಕಿಡ್ಸ್ ಪ್ಯಾರಡೈಸ್ ಮಕ್ಕಳ ಮನೆಯ 5ನೇ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು.
ಪುಟಾಣಿಗಳು ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಗಮನ ಸೆಳೆದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಮಂದಣ್ಣ, ಲಯನೆಸ್‍ನ ಶೋಭಾ ಪ್ರೀತಂ, ಶಿಕ್ಷಕಿ ಸುಧಾ ಕಿಶೋರ್ ಹಾಗೂ ಪೋಷಕ ವರ್ಗ ಉಪಸ್ಥಿತರಿದ್ದರು. ಛದ್ಮವೇಷ ಸ್ವರ್ಧೆಯಲ್ಲಿ ಭಾಗವಹಿಸಿದ್ದ ಪುಟಾಣಿಗಳಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.
ವ್ಯವಸ್ಥಾಪಕರಾದ ಸುರೇಶ್ ಕುಮಾರ್, ಪೂರ್ಣಿಮ ಹಾಗೂ ವನಿತಾ ಕಾರ್ಯಕ್ರಮ ನಡೆಸಿಕೊಟ್ಟರು. ಪತ್ರಕರ್ತ ವಿಘ್ನೇಶ್ ಹಾಜರಿದ್ದರು.