ಮಡಿಕೇರಿ, ಏ. 11: ಮಕ್ಕಂದೂರು ಗ್ರಾಮದ ಶ್ರೀ ಭದ್ರಕಾಳೇಶ್ವರಿ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಕಳೆದ ಒಂದು ವಾರದಿಂದ ನಡೆಯುತ್ತಿದ್ದ ದೇವರ ವಿವಿಧ ಆರಾಧನೆಗಳು ತೆಂಗಿನಕಾಯಿಗೆ ಗುಂಡು ಹೊಡೆಯುವದರೊಂದಿಗೆ ತೆರೆಕಂಡಿತು. ಊರಿನ 24 ಒಕ್ಕಲು ಸೇರಿ ಸಾಂಪ್ರದಾಯಿಕ ದಿರಿಸಿನಲ್ಲಿ ಕೊಡಿಯಾಟ್, ಕೊಂಬಾಟ್, ಬೊಳಕಾಟ್, ಪೀಲಿಯಾಟ್, ಚೌರಿಯಾಟ್ ಆಡಿ, ಕಾಳೆ ಓಡಿಸುವ ಮೂಲಕ ಭದ್ರಕಾಳಿಯನ್ನು ಸ್ತುತಿಸಿದರು. ಅಲ್ಲದೆ ಇಷ್ಟಾರ್ಥ ಸಿದ್ಧಿಗಾಗಿ ಭಕ್ತವೃಂದ ವಿವಿಧ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು.

ಮಾರ್ಚ್ 31ರಿಂದ ಆರಂಭವಾದ ಭದ್ರಕಾಳಿ ದೇವರ ಹಬ್ಬದಲ್ಲಿ ಹೂವು ಅಕ್ಕಿ ಹಿಡಿಯುವದು, ಶ್ರೀ ಕೈತಲಪ್ಪ ದೇವರ ಕೊಡಿಯಾಟ, ಬೇಡು ಹಬ್ಬ, ಮಹಾದೇವರ ದೊಡ್ಡ ಹಬ್ಬ, ಆಂಗೋಲ-ಪೋಂಗಲ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನಡೆದವು.