ಸುಂಟಿಕೊಪ್ಪ, ಏ. 11: ಇಲ್ಲಿಗೆ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ವಾಸದ ಮನೆ ಮೇಲೆ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ.
ಇಲ್ಲಿನ ಬಿ.ವಿ. ಕೊರಗಪ್ಪ ಎಂಬವರ ಮನೆ ಮೇಲೆ ಮಧ್ಯರಾತ್ರಿ 1.30 ಗಂಟೆಗೆ ಭಾರೀ ಗಾಳಿ-ಮಳೆಗೆ ಭಾರಿಗಾತ್ರದ ಸಿಲ್ವರ್ ಮರ ಬಿದ್ದ ಪರಿಣಾಮ ಮನೆಯ ತಡೆಗೋಡೆ ಪಿಲ್ಲರ್ ಹಾಗೂ ಮೇಲ್ಚಾವಣಿಗಳು ಜಖಂಗೊಂಡಿವೆ. ಅಂದಾಜು ಸುಮಾರು ರೂ. 40,000 ನಷ್ಟ ಸಂಭವಿಸಿದೆ. ಮನೆಯಲ್ಲಿ ವಾಸವಿದ್ದವರು ನೆಂಟರ ಮನೆಗೆ ತೆರಳಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಈ ಸಂಬಂಧÀ ಕಂದಾಯ ಇಲಾಖೆ ದೂರು ನೀಡಿದ್ದು, ಕಂದಾಯ ಪರಿವೀಕ್ಷಕ ಬಿ.ಪಿ. ಕೃಷ್ಣಪ್ಪ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.