ನಾಪೆÉÇೀಕ್ಲು, ಏ. 11: ಆದಿ ಶ್ರೀ ಪನ್ನಂಗಾಲತಮ್ಮೆ ದೇವಿಯ ನೆಲೆಯು ಸತ್ಯ ಸಂದತೆಯಿಂದ ಭಯ ಭಕ್ತಿಯಿಂದ ಕೂಡಿದ ಪ್ರಸಿದ್ಧ ದೇವರ ತಾಣವಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿಯಿಂದ ನಾಪೆÇೀಕ್ಲು ಕಕ್ಕಬ್ಬೆ ಮಾರ್ಗವಾಗಿ 35 ಕಿ.ಮೀ. ಸಾಗಿದರೆ ಈ ದೇವಾಲಯವನ್ನು ತಲುಪ ಬಹುದು. ವಾರ್ಷಿಕವಾಗಿ ಏಪ್ರಿಲ್ ತಿಂಗಳಲ್ಲಿ ಈ ದೇವರ ಹಬ್ಬವು ಜರಗುತ್ತದೆ. ವಿಶೇಷತೆಯೆಂದರೆ ಈ ದೇವಿಯನ್ನು ಪರಿಶಿಷ್ಟ ಜನಾಂಗ ದವರು ಪÀÇಜಿಸುತ್ತಾರೆ. ಪರಿಶಿಷ್ಟ ಜನಾಂಗದವರಿಗೆ ಇಲ್ಲಿ ದೈವಾಧೀನ (ತಿರೋಳ) ಬರುತ್ತದೆ. ಅಂದರೆ ಕರಿಚಾಮುಂಡಿ, ಮುಂಜೌಂಡಿ, ಚೌಂಡಿ, ಅಯ್ಯಪ್ಪ ಮತ್ತಿತರ ಉಗ್ರ ಮೂರ್ತಿ ದೇವತೆಗಳು ಮೈಮೇಲೆ ಬಂದು ಜೋಡಿ ಕತ್ತಿಯಿಂದ ತಲೆಗೆ ಕಡೆದುಕೊಳ್ಳುವ ದೃಶ್ಯ ಆಶ್ಚರ್ಯಕರ ಮತ್ತು ವಿಶೇಷ.

ಇತಿಹಾಸ : ಶ್ರೀ ಪನ್ನಂಗಾಲತಮ್ಮೆ ದೇವಿಯು ಕುಲ ದೇವ ಶ್ರೀ ಇಗ್ಗುತ್ತಪ್ಪ, ದೇವರ ತಂಗಿಯೆಂದೆ ಪ್ರಖ್ಯಾತಿ ಕೇರಳ ರಾಜ್ಯದಿಂದ 5 ಜನ ಅಣ್ಣ ತಮ್ಮಂದಿಯರು ಅಂದರೆ ಇಗ್ಗತ್ತಪ್ಪ, ಬೈತುರಪ್ಪ, ಪಾಲೂರಪ್ಪ, ಬೇಂದ್ರ ಕೋಲಪ್ಪ, ತಿರುನೆಲ್ಲಿ ಪೆಮ್ಮಯ್ಯ, ಮತ್ತು ಒಬ್ಬ ತಂಗಿ ಪನ್ನಂಗಾಲತಮ್ಮೆ ಪ್ರಸಿದ್ಧ ನೆಲೆ ಅರಸಿ ಬಂದು ಈಗಿರುವ ಮಲ್ಮ ಬೆಟ್ಟದ ಮೇಲೆ ನಿಂತಿರುವ ಸಂದರ್ಭ ಮಧ್ಯಾಹ್ನದ ಸಮಯ ಅಣ್ಣ ತಮ್ಮಂದಿರೆಲ್ಲಾ ಹೊಟ್ಟೆ ಹಸಿವಿನಿಂದ ಇದ್ದ ಸಂದರ್ಭ ತಂಗಿಯಾದ ಪನ್ನಂಗಾಲತಮ್ಮೆ ನಾನು ಬೆಂಕಿ ಇಲ್ಲದೆ ಅನ್ನ ತಯಾರು ಮಾಡುತ್ತಿನಿ ನೀವು ಉಪ್ಪು ಇಲ್ಲದೆ ಊಟ ಮಾಡಬೇಕೆಂದು ತಾಕಿತು ಮಾಡಿ ಅದರಂತೆ ಬೆಂಕಿ ಇಲ್ಲದೆ ಊಟ ತಯಾರು ಮಾಡಿ ಊಟಕ್ಕೆ ಬಾಳೆ ಎಲೆ ಬೇಕೆಂದಾಗ ಅಣ್ಣಂದಿರು ಬಾಳೆ ಎಲೆಗಾಗಿ ಪಕ್ಕದ ಪರದಂಡ ಕುಟುಂಬಕ್ಕೆ ಸೇರಿದ ತೋಟಕ್ಕೆ ಎಲೆಗಾಗಿ ಹೋದ ಸಂದರ್ಭ ಆ ಮನೆಯ ವೃದ್ಧೆಯೊಬ್ಬಳು ಇವರಿಗೆ ಎಲೆ ಕಡಿಯಬಾರದೆಂದು ಹೇಳುತ್ತಾರೆ. ದೇವ ಪುರುಷರಾದ ಇವರು ಇನ್ನು ಮುಂದೆ ಇಲ್ಲಿ ಬಾಳೆಗೊನೆ ಆಗದಿರಲಿ ಎಂದು ಶಾಪ ಹಾಕುತ್ತಾರೆ; ಇಂದಿಗೂ ಈ ಶಾಪ ಇದೆಯೆಂದು ಹೇಳುತ್ತಾರೆ. ನಂತರ ಊಟಕ್ಕೆ ಕುಳಿತ ಸಂದರ್ಭ ಉಪ್ಪು ಇಲ್ಲದ ಊಟ ಈ ಸಮಯ ಅಣ್ಣನಾದ ಪಾಲೂರಪ್ಪ ಮಳೆ ಬರುವಾಗ ಆಲಿ ಈಗೆ ಬೀಳುತ್ತದೆ ಮೇಕ್ಕೆ ಅನ್ನವನ್ನು ಎಸೆಯುತ್ತಾನೆ ಇದರಿಂದ ಕೋಪಗೊಂಡ ಪನ್ನಂಗಾಲತಮ್ಮೆ ಸಟುಗದಿಂದ ಅಣ್ಣನಾದ ಪಾಲೂರಪ್ಪನ ಕೆನ್ನೆಗೆ ಬಾರಿಸುತ್ತಾಳೆ ಇದರಿಂದ ಕೋಪಗೊಂಡ ಪಾಲೂರಪ್ಪ ಇವಳನ್ನು ಹೇಗಾದರೂ ಮಾಡಿ ವಂಚಿಸಬೇಕೆಂದು ಊಟವಾದ ಮೇಲೆ ಎಲೆ ಅಡಿಕೆ ತಿನ್ನೋಣ ಎಂದು ಎಲೆ ಅಡಿಕೆ ಜಗಿದು, ಯಾರದು ಕೆಂಪು ನೋಡೊಣ ಎಂದು ಕೈಗೆ ಎಂಜಲನ್ನು ಉಗಿದು ನಂತರ ಬಾಯಿಗೆ ಹಾಕುವಂತೆ ಮಾಡಿ ಹಿಂದಕ್ಕೆ ಎಸೆಯುತ್ತಾರೆ ಆದರೆ ಏನು ತಿಳಿಯದ ತಂಗಿ ಪನ್ನಂಗಾಲತಮ್ಮೆ ಈ ಎಂಜಲನ್ನು ಪುನ: ನುಂಗುತ್ತಾಳೆ ಇದನ್ನೆ ಕಾದಿದ್ದ ಪಾಲೂರಪ್ಪ ಎಂಜಲನ್ನು ತಿಂದವಳು ಜಾತಿ ಭ್ರಷ್ಟಳು ನೀನು ನಮ್ಮೊಂದಿಗೆ ಇರದೆ ದೂರವಿರು ಎಂದು ಹೇಳಿದಾಗ ಅಣ್ಣ ಇಗ್ಗುತ್ತಪ್ಪನಿಗೆ ಬೇಜಾರಾಗಿ ಇರುವ ಒಬ್ಬ ತಂಗಿ ನನಗೆ ಕಾಣುವಂತೆ ಇರಲಿ ಎಂದು ಬಾಣ ಹೂಡುತ್ತಾನೆ. ಈ ಬಾಣವು ಈಗಿನ ಪನ್ನಂಗಾಲದ ಹೊಳೆ ಬದಿಯ ಕಾಡಿನ ಮಾವಿನ ಮರಕ್ಕೆ ತಾಗುತ್ತದೆ ಅದೇ ಕ್ಷಣ ತಂಗಿಯಾದ ಪನ್ನಂಗಾಲತಮ್ಮೆ ಕೊಕ್ಕರೆ ರೂಪ ತಾಳಿ ಹಾರಿ ಬಂದು ಬಾಣ ಬಿಟ್ಟ ಜಾಗದ ಪಕ್ಕ ಕರ್ತಂಡ ಕುಟುಂಬಕ್ಕೆ ಸೇರಿದ ಗದ್ದೆಯಲ್ಲಿ ಕೂತಿರುತ್ತದೆ. ಈ ಸಂದರ್ಭ ಕರ್ತಂಡ ಮನೆಯ ಪರಿಶಿಷ್ಟ ಜಾತಿಯ ಕಾರ್ಮಿಕ ಗದ್ದೆಗೆ ಸಗಣಿ ತರುವ ಸಂದರ್ಭ ಕೊಕ್ಕರೆ ಕುಳಿತಿರುವದನ್ನು ನೋಡಿ ಆ ಕುಕ್ಕೆಯಿಂದ ಈ ಕೊಕ್ಕರೆಯನ್ನು ಮುಚ್ಚಿದಾಗ ಅದು ಕಲ್ಲಾಗಿ ಈ ಕಾರ್ಮಿಕನ ಮೇಲೆ ಪನ್ನಂಗಾಲ ದೇವರು ಬಂದು ನೆಲೆ ಕೇಳಲಾಗಿ ಈಗಿರುವ ದೇವಾಲಯದಲ್ಲಿ ನೆಲೆ ಕೊಟ್ಟು ಪರಿಶಿಷ್ಟ ಜನಾಂಗದವರು ಈ ದೇವರನ್ನು ಪೂಜಿಸುವಂತಾ ಗಿದೆ.

ಈ ದೇವಾಲಯದ ತಕ್ಕ ಮುಖ್ಯಸ್ಥರಾದ ಅಂಜಪರುವಂಡ, ಕರ್ತಂಡ, ಅಪ್ಪಾರಂಡ, ಐನಮಂಡ, ಕುಟುಂಬದವರು ದೇವರ ಹಬ್ಬ ವನ್ನು ನೂರಾರು ವರ್ಷಗಳಿಂದ ಆಚರಿಸುತ್ತಾ ಬರುತ್ತಿದ್ದಾರೆ. ಶ್ರೀ ಪನ್ನಂಗಾಲತಮ್ಮೆ ದೇವರ ಹಬ್ಬವು ತಾ, 12 ಮತ್ತು 13 ರಂದು ಜರುಗಲಿದೆ. ಎರಡು ವರ್ಷಕೊಮ್ಮೆ ದೊಡ್ಡ ಹಬ್ಬವಿದ್ದು, ಈ ಬಾರಿ ದೊಡ್ಡ ಹಬ್ಬ ನಡೆಯಲಿದೆ.

- ದುಗ್ಗಳ ಸದಾನಂದ