ಮಡಿಕೇರಿ, ಏ. 11: ಜಿಲ್ಲೆಯ ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಂದು ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಜಿಲ್ಲಾಡಳಿತದ ನಿರ್ದೇಶನದಂತೆ ಇಂದು ಜಿಲ್ಲೆಯ ವಿವಿಧ ಗ್ರಾ.ಪಂ. ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಿ ಜನಾಭಿಪ್ರಾಯವನ್ನು ಸಂಗ್ರಹಿಸಿತು.

ಸಿದ್ದಾಪುರ: ಕಸ್ತೂರಿ ರಂಗನ್À ವರದಿಯ ಬಗ್ಗೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಸಮರ್ಪಕವಾದ ಮಾಹಿತಿಯನ್ನು ಜನರಿಗೆ ತಿಳಿಸಲು ವಿಫಲವಾಗಿದ್ದಾರೆ ಎಂದು ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷÀ ಬಿದ್ರುಪಣೆ ಮೋಹನ ಆರೋಪಿಸಿದ್ದಾರೆ.

ಮರಗೋಡು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಕಸ್ತೂರಿ ರಂಗನ್ ವರದಿಯ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು. ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯು ಕಸ್ತೂರಿ ರಂಗನ್ ವರದಿಗೆ ಸೇರ್ಪಡೆಗೊಳ್ಳದಿದ್ದರೂ ಜಿಲ್ಲೆಯ ಇತರ ಪಂಚಾಯತಿಗಳು ಕಸ್ತೂರಿರಂಗನ್ ವರದಿಗೆ ಸೇರಿದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ಯಾವದೇ ತೊಂದರೆಯಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಮುಂಡೋಡಿ ನಂದ ನಾಣಯ್ಯ ಮಾತನಾಡಿ 2013ರಿಂದ ಜಾರಿಗೆ ತಂದಿರುವ ಕಸ್ತೂರಿ ರಂಗನ್ ವರದಿಯನ್ನು 4 ವರ್ಷಗಳ ಬಳಿಕ ತಡವಾಗಿ ಜಾರಿಗೆ ತಂದು ವಿಶೇಷ ಗ್ರಾಮಸಭೆ ನಡೆಸುತ್ತಿರುವುದು ನಾಟಕೀಯ ಎಂದು ಆರೋಪಿಸಿದರಲ್ಲದೇ ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ಚಕಾರವೆತ್ತದೆ ಮೌನ ವಹಿಸಿರುವದು ಖಂಡನಿಯ ಎಂದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಧನಂಜಯ, ಗೌರಮ್ಮ, ಜಯ ಸೇರಿದಂತೆ ಮತ್ತಿತರರು ಇದ್ದರು.

*ಗೋಣಿಕೊಪ್ಪಲು: ಡಾ. ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಟಿ.ಶೆಟ್ಟಿಗೇರಿ ಗ್ರಾ.ಪಂ. ನಿರ್ಣಯ ಕೈಗೊಂಡಿತು.

ಟಿ.ಶೆಟ್ಟಿಗೇರಿ ವಿ.ಎಸ್.ಎಸ್.ಎನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವಿರೋಧಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು.

ಕಸ್ತೂರಿ ರಂಗನ್ ವರದಿ ಜಾರಿಯಿಂದ ಸ್ಥಳೀಯ ಗ್ರಾಮಗಳಿಗೆ ಆಗುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ನಂತರ ಸಭೆಯ ಒಕ್ಕೊರಲಿನ ತೀರ್ಮಾನದಂತೆ ವಿರೋಧ ನಿರ್ಣಯಕ್ಕೆ ಮುಂದಾದರು.

ಗ್ರಾ.ಪಂ. ಅಧ್ಯಕ್ಷ ಸುಮಂತ್ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಪ್ರಮುಖರಾದ ಚೆಟ್ಟಂಗಡ ರಂಜು ಕರುಂಬಯ್ಯ, ಚೆಟ್ಟಂಗಡ ಮಹೇಶ್ ಮಂದಣ್ಣ, ಕಟ್ಟೇರ ಈಶ್ವರ ಹಲವರು ಉಪಸ್ಥಿತರಿದ್ದರು.

ನಾಪೆÇೀಕ್ಲು: ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಿಂದಾಗುವ ಸಾಧಕಗಳಿಗಿಂತ ಬಾಧಕಗಳೇ ಹೆಚ್ಚಾಗಿದ್ದು, ಬೆಳೆಗಾರರು ತೀವ್ರ ತರಹದ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಆದುದರಿಂದ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವದೇ ಬೇಡ ಎಂದು ಬಲ್ಲಮಾವಟಿ ಗ್ರಾಮ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒಕ್ಕೊರಲ ನಿರ್ಣಯವನ್ನು ಕೈಗೊಂಡರು.

ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮವನ್ನು ಸೂಕ್ಷ್ಮ ಪರಿಸರ ತಾಣವನ್ನಾಗಿ ಗುರುತಿಸಲಾಗಿದ್ದು, ಈ ಭಾಗದಲ್ಲಿ ಹಲವು ಸಣ್ಣ ಬೆಳೆಗಾರರಿದ್ದಾರೆ. ಕಾಫಿ ತೋಟಗಳ ಕೆಲಸಗಳಿಗೆ ನಿರ್ಬಂಧ ಹೇರುವದರಿಂದ ಸ್ಥಳೀಯ ನಿವಾಸಿಗಳ ಜನ ಜೀವನಕ್ಕೆ ತೊಂದರೆಯಾಗಲಿದೆ. ಸೂಕ್ಷ್ಮ ಪರಿಸರ ತಾಣದಲ್ಲಿ ಯಾವದೇ ಚಟುವಟಿಕೆಗಳನ್ನು ಕೈಗೊಳ್ಳಲು ಪೂರ್ವಾನುಮತಿ ಪಡೆಯುವದು ಸಂದಿಗ್ಧ ಪರಿಸ್ಥಿತಿಯಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದರು. ಸಭೆಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಟ್ಟಿರ ಸರಸು ಪೆಮ್ಮಯ್ಯ ವಹಿಸಿದ್ದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ನೋಡಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ಸುಕ್ರು ದೇವೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಬೈರುಡ ಮುತ್ತಪ್ಪ, ಚಂಗೇಟಿರ ಕುಮಾರ, ಬದ್ದಂಜೆಟ್ಟಿರ ದೇವಿ ದೇವಯ್ಯ ಮತ್ತಿತರರು ಇದ್ದರು.

ಗೋಣಿಕೊಪ್ಪಲು : ಕಸ್ತೂರಿ ರಂಗನ್ ವರದಿ ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ವಿಶೇಷ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.

ಗ್ರಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಮೂಕಳೇರ ಸುಮಿತಾ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಸರ್ವ ಸದಸ್ಯರು ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ಮಂಜುಳಾ, ಪಿಡಿಓ ಅಬ್ದುಲಾ ಇದ್ದರು.

ಆಲೂರುಸಿದ್ದಾಪುರ/ಒಡೆಯನಪುರ: ಸಮೀಪದ ನಿಡ್ತ ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಮುಸ್ತಾಪ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟ ಸಾಲು ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡುತ್ತದೆ. ಕಸ್ತೂರಿರಂಗನ್ ವರದಿಗೆ ಮಾಲಂಬಿ ಬೆಟ್ಟಸಾಲಿನಲ್ಲಿ ರುವ ತಪ್ಪಲಿನ ಗ್ರಾಮಗಳನ್ನು ಈಗಾಗಲೇ ಒಳಪಡಿಸಲಾಗಿದೆ. ಪಶ್ಚಿಮಘಟ್ಟ ಬೆಟ್ಟಸಾಲಿನಿಂದ 10 ಕಿ.ಮೀ.ದೂರದಲ್ಲಿರುವ ಗ್ರಾಮಗಳು ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ನಿಡ್ತ ಗ್ರಾ.ಪಂ.ಯೂ ಒಳಪಡುತ್ತದೆ. ಈ ಕುರಿತು ವರದಿಯಲ್ಲಿರುವ ಸಾಧಕ-ಬಾಧÀಕಗಳ ಬಗ್ಗೆ ಚರ್ಚಿಸಲು ಗ್ರಾಮಸ್ಥರ ಸಭೆ ನಡೆಯಿತು.

ಸಭೆಯಲ್ಲಿ ಗ್ರಾ.ಪಂ. ಪಿ.ಡಿ.ಓ. ಪ್ರತಿಮಾ ಕಸ್ತೂರಿರಂಗನ್ ವರದಿಯಲ್ಲಿರುವ ಉಲ್ಲೇಖ, ಇದರಿಂದ ಜನರಿಗಾಗುವ ಲಾಭ-ನಷ್ಟಗಳ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿದ ಗ್ರಾಮಸ್ಥರು ಕಸ್ತೂರಿರಂಗನ್ ವರದಿಯಲ್ಲಿ ಬಹಳಷ್ಟು ವಿಚಾರದಲ್ಲಿ ಸಾರ್ವಜನಿಕರಿಗೆ, ರೈತರಿಗೆ, ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತದೆ, ಈ ನಿಟ್ಟಿನಲ್ಲಿ ಕಸ್ತೂರಿರಂಗನ್ ವರದಿಯಲ್ಲಿ ಬಾಧಕವಾಗುವ ಸಾಧ್ಯತೆ ಹೆಚ್ಚಿರುವದರಿಂದ ವರದಿಯನ್ನು ವಿರೋಧಿಸಬೇಕೆಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಸಭೆಯಲ್ಲಿ ವರದಿಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ನಿರ್ಣಯವಾದ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸುವಂತೆಯೂ ನಿರ್ಣಹಿಸಲಾಯಿತು.

ಸಭೆಯಲ್ಲಿ ಹಾಜರಿದ್ದ ಜಿ.ಪಂ. ಸದಸ್ಯೆ ಸರೋಜಮ್ಮ ಮಾತನಾಡಿ, ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಸ್ತೂರಿರಂಗನ್ ವರದಿಯನ್ನು ವಿರೋಧಿಸುತ್ತಿದೆ. ಶಾಸಕರು, ಜಿ.ಪಂ. ಮಟ್ಟದಲ್ಲಿ ಈ ಕುರಿತಾಗಿ ಸಭೆಯನ್ನು ನಡೆಸಿ ಕಸ್ತೂರಿರಂಗನ್ ವರದಿಯನ್ನು ವಿರೋಧಿಸಲಾಗಿದೆ. ಆದರೆ ಗ್ರಾ.ಪಂ. ವ್ಯಾಪ್ತಿ ಪ್ರತಿಯೊಂದಕ್ಕೂ ತಳಹದಿ ಆಗಿರುತ್ತದೆ ಎಂದರು.

ಈ ಸಂದರ್ಭ ತಾ.ಪಂ. ಸದಸ್ಯೆ ಲೀಲಾವತಿ ಮಹೇಶ್, ನೋಡೆಲ್ ಅಧಿಕಾರಿ ಸತೀಶ್, ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಸುಂಟಿಕೊಪ್ಪ: ಸಮೀಪದ ಕೊಡಗರಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಅಭಿಪ್ರಾಯ ಸ್ವೀಕರಿಸುವ ವಿಶೇಷ ಗ್ರಾಮ ಸಭೆಯು ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಸಿ. ಅಬ್ಬಾಸ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಸಭಾಂಗಣದಲ್ಲಿ ನಡೆಯಿತು.

ಬಳಿಕ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಇಡೀ ಕೊಡಗಿಗೆ ತೊಂದರೆಯಾಗಿದೆ. ಅದು ಕೇವಲ ಅರಣ್ಯ ಪ್ರದೇಶಕ್ಕೆ ಮಾತ್ರ ಅನುಷ್ಠಾನಗೊಂಡರೆ ಒಳಿತು. ಜನವಸತಿ ಪ್ರದೇಶ, ತೋಟ, ಗದ್ದೆಗಳನ್ನು ಈ ವರದಿಗೆ ಸೇರಿಸಿದರೆ ನಮ್ಮ ಬದುಕು ಡೋಲಾಯಮಾನವಾಗುತ್ತದೆ.ಅರಣ್ಯ ಪ್ರದೇಶದಿಂದ 10 ಕಿ.ಮೀ. ವ್ಯಾಪ್ತಿ ಸೇರಿಸಿದರೆ ಕೊಡಗರಹಳ್ಳಿ ಮತ್ತು ಇದರ ವ್ಯಾಪ್ತಿಯ ಗ್ರಾಮಗಳು ಸಂಪೂರ್ಣ ನಾಶಗೊಳ್ಳುತ್ತದೆ ಎಂದರು.

ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಬ್ಯಾಂಕಿನ ಅಧ್ಯಕ್ಷ, ಕಾಫಿ ಬೆಳೆಗಾರ ಎನ್.ಸಿ. ಪೊನ್ನಪ್ಪ ಮಾತನಾಡಿ, ಈ ವರದಿಯು ಕೊಡಗಿಗೆ ಮಾರಕವಾಗಿದ್ದು, ಕೂಡಲೇ ಇದನ್ನು ತಡೆ ಹಿಡಿಯಬೇಕು ಎಂದರು.

ಸಭೆಯಲ್ಲಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮ ಕುಂಜ್ಞಿ, ಸದಸ್ಯೆ ಸುಮಿತ್ರ, ಪಿಡಿಓ ನಂದೀಶ್ ಕುಮಾರ್, ಕಾರ್ಯದರ್ಶಿ ಅಂಜನದೇವಿ ಇತರರು ಉಪಸ್ಥಿತರಿದ್ದರು.