ನಾಪೆÉÇೀಕ್ಲು, ಏ. 11: ಕಸ್ತೂರಿ ರಂಗನ್ ವರದಿಯ ಸಾಧಕ - ಬಾಧಕ ಗಳನ್ನು ಜನರಿಗೆ ತಿಳಿಸಲು ಜಿಲ್ಲಾಡಳಿತ ಮತ್ತು ಸರಕಾರ ವಿಫಲಗೊಂಡಿರುವದೆ ಸಮಸ್ಯಗೆ ಕಾರಣವಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ನಾಪೆÉÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆಯನ್ನು ನೇರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಗೋವಾದಲ್ಲಿ ನಡೆದ ಗ್ರೀನ್ ಬೆಂಚ್ ಕೇಸ್ ಸಭೆಯಲ್ಲಿ ನಮ್ಮ ರಾಜ್ಯ ಸರಕಾರದ ಅಧಿಕಾರಿಗಳು ಭಾಗವಹಿಸದೆ ವಾದ ಮಂಡನೆ ಮಾಡದೇ ಇರುವದರಿಂದ ಇಂದು ಸಾಮಾನ್ಯ ಜನರು ವರದಿಗೆ ಭಯಪಡುವಂತಾಗಿದೆ. ಜಿಲ್ಲೆಯ ಅಧಿಕಾರಿಗಳು ಜನರಿಗೆ ತಪ್ಪು ಸಂದೇಶ ನೀಡಿ ಜನರನ್ನು ತೊಂದರೆಗೆ ಸಿಲುಕಿಸಿದ್ದಾರೆ ಇದು ಖಂಡನೀಯ ಎಂದರು. ಕೇರಳ ರಾಜ್ಯ ಸರ್ಕಾರ ವಾದ ಮಂಡಿಸಿರುದರಿಂದ ಅವರಿಗೆ ಅನುಕೂಲವಾಗಿದೆ ಎಂದ ಅವರು 10 ಜಿಲ್ಲೆಗಳ 55 ಗ್ರಾಮಗಳಲ್ಲಿ ಸ್ವಾಭಾವಿಕ ಅರಣ್ಯ, ಪೈಸಾರಿ ಜಾಗ, ಖಾಸಗಿ ಜಾಗವನ್ನು ಮೊದಲು ಕಂಡು ಹಿಡಿದು ಇಲ್ಲಿನ ಜನಸಂಖ್ಯೆಯನ್ನು ಆಯಾಯ ಗ್ರಾಮ ಪಂಚಾಯಿತಿ ಸಭೆಯಲ್ಲಿ ಗ್ರಾಮಸಭೆ ನಡೆಸಿ ಇದರ ಸಾಧಕ - ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಒಂದು ಸಮಿತಿಯನ್ನು ರಚಿಸಿ ಇವರ ನಿರ್ಣಯವನ್ನು ಸರಕಾರಕ್ಕೆ ಕಳುಹಿಸಿ ಕೊಡಬೇಕೆಂದ ಅವರು ಇದನ್ನು ತಾ 27ರ ಒಳಗೆ ಸರಕಾರಕ್ಕೆ ತಲುಪಿಸುವ ವ್ಯೆವಸ್ಥೆಯಾಗಬೇಕೆಂದರು
ಈ ವಿಭಾಗದಲ್ಲಿ ಶಾಸಕರ ನಿಧಿ ಮತ್ತು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ಅನುಧಾನದ ಸುಮಾರು ರೂ. 74 ಲಕ್ಷ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಕಾಮಗಾರಿಯ ಉದ್ಘಾಟನೆಯನ್ನು ನೆರವೆರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರುಳೀಧರ್ ಕರಂಬಮ್ಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್, ಸದಸ್ಯರಾದ ಕೋಡಿಯಂಡ ಇಂದಿರಾ, ಎನ್.ಪಿ. ಉಮಾಪ್ರಭು, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಆರ್.ಎಂ.ಸಿ. ಸದಸ್ಯ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಮುತ್ತುರಾಣಿ ಅಚ್ಚಪ್ಪ, ಕೆ.ಎನ್. ಜ್ಯೋತಿ, ಬಿ.ಎಂ. ಚಿತ್ರ, ಸುಶೀಲಮ್ಮ, ಬಿಜೆಪಿ ಮುಖಂಡ ಪಾಡಿಯಮ್ಮಂಡ ಮನು ಮಹೇಶ್, ಬಿ.ಎಂ. ಪ್ರತೀಪ್, ಭಗವತಿ ದೇವಳದ ಅಧ್ಯಕ್ಷ ಕುಲ್ಲೇಟಿರ ಮಾದಪ್ಪ, ಗೌರವ ಕಾರ್ಯದರ್ಶಿ ಅರೆಯಡ ಡಿ. ಸೋಮಪ್ಪ, ದೇವಳ ಆಡಳಿತ ಮಂಡಳಿ ಸದಸ್ಯರು ಇದ್ದರು