ಭಾಗಮಂಡಲ, ಏ. 11: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಯ ಕೆದಂಬಾಡಿ ಕಪ್‍ನ ಇಂದಿನ ಪಂದ್ಯದಲ್ಲಿ ನಿಡ್ಯಮಲೆ ಹಾಗೂ ಬೇಕಲ್ ತಂಡಗಳು ಮುಂದಿನ ಹಂತ ಪ್ರವೇಶಿಸಿವೆ.
ಇಂದಿನ ಪಂದ್ಯದಲ್ಲಿ ಕೆದಂಬಾಡಿ ತಂಡವು 58 ರನ್ ಗುರಿ ನೀಡಿದರೆ, ಉತ್ತರವಾಗಿ ದಾಯನ 7 ವಿಕೆಟ್‍ಗೆ 41 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನುಭವಿಸಿತು. ಕೂರನ ತಂಡವು 5 ವಿಕೆಟ್‍ಗೆ 67 ರನ್ ಬಾರಿಸಿದರೆ, ಕಾವೇರಿಮನೆ 50 ರನ್ ಗಳಿಸಿ ಸೋತಿತು. ಬೇಕಲ್ 3 ವಿಕೆಟ್‍ಗೆ 46 ರನ್ ಬಾರಿಸಿದರೆ, ತುಂತಜೆ 40 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೂರನ ತಂಡವು 54 ರನ್ ಗುರಿ ನೀಡಿದರೆ, ಕೆದಂಬಾಡಿ ‘ಬಿ’ 36 ರನ್ ಗಳಿಸಿ ಸೋಲನುಭವಿಸಿತು. ಜತ್ತನ 34 ರನ್ ಗಳಿಸಿದರೆ, ನಿಡ್ಯಮಲೆ 2 ವಿಕೆಟ್‍ಗೆ ಗುರಿ ಸಾಧನೆ ಮಾಡಿತು. ಚೆರಿಯಮನೆ 3 ವಿಕೆಟ್‍ಗೆ 62 ರನ್ ಬಾರಿಸಿದರೆ, ಕಟ್ಟೆಕೋಡಿ 35 ರನ್ ಗಳಿಸಲಷ್ಟೇ ಶಕ್ತವಾಯಿತು. ಕುದುಪಜೆ 5 ವಿಕೆಟ್‍ಗೆ 49 ರನ್ ಬಾರಿಸಿದರೆ, ನಿಡ್ಯಮಲೆ 2 ವಿಕೆಟ್‍ಗೆ 50 ರನ್ ಗಳಿಸಿ ಗೆಲುವು ದಾಖಲಿಸಿತು. ಅಂಚೆಕಾಳೇರಮ್ಮನ 4 ವಿಕೆಟ್‍ಗೆ 67 ರನ್ ಗಳಿಸಿದರೆ, ಬೇಕಲ್ ತಂಡವು 1 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಚೆರಿಯಮನೆ 8 ವಿಕೆಟ್‍ಗೆ 44 ರನ್ ಬಾರಿಸಿದರೆ, ನಿಡ್ಯಮಲೆ 2 ವಿಕೆಟ್‍ಗೆ 45 ರನ್ ಬಾರಿಸಿ ಜಯ ದಾಖಲಿಸಿ ಮುಂದಿನ ಹಂತ ಪ್ರವೇಶಿಸಿತು. ಇಂದು ಪಂದ್ಯಾಟಕ್ಕೆ ಬಿಡುವು ಇದ್ದು, ತಾ. 13 ರಂದು ಪಂದ್ಯಾಟ ಜರುಗಲಿದೆ.