ವೀರಾಜಪೇಟೆ, ಏ. 11: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೆದುಳು ಕ್ಯಾನ್ಸ್‍ರ್‍ಗೆ ತುತ್ತಾದ ಒಂದನೇ ರುದ್ರುಗುಪ್ಪೆ ಗ್ರಾಮದ ಕೋಲತಂಡ ಪೂಣಚ್ಚ ಅವರ ಚಿಕಿತ್ಸೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಒಂದು ಲಕ್ಷ ರೂಪಾಯಿ ಪರಿಹಾರವನ್ನು ಅವರ ಪತ್ನಿ ಶಾರದ ಅವರಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಕೋಲತಂಡ ರಘು ಮಾಚಯ್ಯ, ಕಂಜಿತಂಡ ಮೊಣ್ಣಪ್ಪ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಕೊಂಗಂಡ ಕಾಶಿ ಕಾವೇರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್ ಮತ್ತಿತರರು ಉಪಸ್ಥಿತರಿದ್ದರು.