ಗೋಣಿಕೊಪ್ಪ, ಏ. 11: ಸುಮಾರು 300ವರ್ಷಗಳ ಇತಿಹಾಸವನ್ನು ಹೊಂದಿರುವ ಪೊನ್ನಂಪೇಟೆ ಸಮಿಪದ ಮುಗುಟಗೇರಿ ಗ್ರಾಮದ ತೋಣಕೇರಿ ಭಗವತಿ ದೇವರ, 17ನೇ ವರ್ಷದ ಜೀರ್ಣೋದ್ಧಾರ ವಾರ್ಷಿಕ ಉತ್ಸವ ಜರುಗಿತು. ಬೆಳಿಗ್ಗೆಯಿಂದಲೇ ಗಣಪತಿ ಹೋಮ, ಕಲಶ ಪೂಜೆ, ಸುಬ್ರಮಣ್ಯ ಪೂಜೆ, ಮಹಾಪೂಜೆಯ ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಅನ್ನ ಸಂರ್ತಪಣೆ ನಡೆಯಿತು. ನೂರಾರು ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ಇದರೊಂದಿಗೆ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನದ ಉದ್ಘಾಟನೆಯನ್ನು ದಾನಿ ನಿವೃತ್ತ ಕ್ಯಾಪ್ಟನ್ ಮಲಚೀರ ತಮ್ಮಯ್ಯ ನೆರವೇರಿಸಿದರು. ದಾನಿಗಳಾದ ಪಿ.ಪಿ ರವೀಂದ್ರ, ಪದ್ಮಜ ಇಲ್ಲಿನ ನಿವಾಸಿ ದೊಡ್ಡಬಳ್ಳಾಪುರದ ಜಿಲ್ಲಾ ನ್ಯಾಯಧೀಶ ಪ್ರಶಾಂತ್, ರಮ್ಯ ಪ್ರಶಾಂತ್ ಹಾಗೂ ಶ್ರೀಕಾಂತ್ ಹಾಗೂ ಮಲಚೀರ ತಮ್ಮಯ್ಯ ಅವರುಗಳನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕಳ್ಳಿಚಂಡ ಪೂವಯ್ಯ, ಕಾರ್ಯದರ್ಶಿ ಚೀರಂಡ ಅಯ್ಯಪ್ಪ, ಖಜಾಂಚಿ ಐನಂಡ ಮಂದಣ್ಣ, ಲೆಕ್ಕ ಪರಿಶೋಧಕ ಚೀರಂಡ ಕಂದಾ ಸುಬ್ಬಯ್ಯ, ಮತ್ತೂರು ದೇವಸ್ಥಾನದ ಮುಖ್ಯಸ್ಥ ಚೆಪ್ಪುಡಿರ ಪೊನ್ನಪ್ಪ, ನಡಿಕೇರಿ ಗೋವಿಂದ ದೇವಸ್ಥಾನದ ಅಧ್ಯಕ್ಷ ಕೋಳೆರ ನರೇಂದ್ರ, ಆಡಳಿತ ಮಂಡಳಿಯ ಇತರೆ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಈ ವರ್ಷದ ವಾರ್ಷಿಕ ಮಹೋತ್ಸವದ ಪೂರ್ಣ ಜವಾಬ್ದಾರಿಯನ್ನು ಅಲೆಮಾಡ ನವೀನ್ ದೇವಯ್ಯ ಹಾಗೂ ಸಂಸಾರ, ಅಲೆಮಾಡ ರೋಷನ್ ಉತ್ತಪ್ಪ ಹಾಗೂ ಸಂಸಾರ, ಕೋಟೆರ ಕಿಸಾನ್ ಸಂಸಾರ, ಹಾಗೂ ಮುದ್ದಿಯಡ ಮಂಜು ಗಣಪತಿ ಸಂಸಾರ ವಹಿಸಿದ್ದರು ಎಂದು ದೇವಸ್ಥಾನದ ಅಡಳಿತ ಮಂಡಳಿಯರು ತಿಳಿಸಿದ್ದಾರೆ.