ಮಡಿಕೇರಿ, ಏ. 11: ಪ್ರತಿಯೊಬ್ಬರು ಕಲೆ, ಸಂಸ್ಕøತಿ ಆಚಾರ ವಿಚಾರವನ್ನು ಉಳಿಸಿ ಬೆಳೆಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಭಾರತೀಯ ಜನತಾಪಕ್ಷದ ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಠದ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಜಯನಗರ ವಿದ್ಯಾರಣ್ಯರ ಹುಟ್ಟುಹಬ್ಬದ ಅಂಗವಾಗಿ ನಡೆದ ಸಾಂಸ್ಕøತಿಕ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶ ಹಲವು ಕಲೆ, ಸಂಸ್ಕøತಿ ಆಚಾರ ವಿಚಾರಗಳನ್ನು ಹೊಂದಿರುವ ದೇಶ. ಅಂತಹ ಕಲೆ, ಸಂಸ್ಕøತಿ ಆಚಾರ ವಿಚಾರಗಳನ್ನು ಬೆಳೆಸುವ ಉದ್ದೇಶದಿಂದ ಪಕ್ಷದಲ್ಲಿ ಸಾಂಸ್ಕøತಿಕ ಪ್ರಕೋಷ್ಠವನ್ನು ರಚಿಸಲಾಗಿದೆ. ಜಿಲ್ಲೆಯಲ್ಲೂ ಹಲವು ಕಲೆಗಳು ಇದೆ. ಇದನ್ನು ಉಳಿಸಿ ಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಈ ಪ್ರಕೋಷ್ಠ ಕಲಾವಿದರನ್ನು ಗುರುತಿಸಿ, ಅವರನ್ನು ಸನ್ಮಾನಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತದೆ. ಪ್ರತಿಯೊಬ್ಬರು ಇದಕ್ಕೆ ಸಹಕಾರ ನೀಡಬೇಕು ಎಂದರು.

ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯೆ ತಸ್ಮಿನ್ ಮಾತನಾಡಿ, ಸಾಂಸ್ಕøತಿಕ ಪ್ರಕೋಷ್ಠ ಜಿಲ್ಲೆಯಲ್ಲಿ ಉತ್ತಮ ಕಲಾವಿದರಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಕಾರ್ಯ ಮಾಡಲಿ. ಕಲಾವಿದರನ್ನು ಗುರುತಿಸಿ ಅವರಿಗೆ ಉತ್ತಮ ಸ್ಥಾನ ಮಾನ ಒದಗಿಸಿ, ಜಿಲ್ಲೆಯಲ್ಲಿ ತಲೆ ಎತ್ತಲಿ ಎಂದು ಆಶಿಸಿದರು.

ಪ್ರಕೋಷ್ಠದ ಜಿಲ್ಲಾ ಸಂಚಾಲಕಿ ಭಾರತಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾವಿದರನ್ನು ಸಂಘಟನೆ ಮಾಡುವ ಉದ್ದೇಶದಿಂದ ಪ್ರಕೋಷ್ಠವನ್ನು ರಚಿಸಲಾಗಿದೆ. ಕಲಾವಿದರ ಸಂಘಟನೆ, ಕಲಾವಿದರಿ ಗಾಗಿ ಕಾರ್ಯಕ್ರಮ ಏರ್ಪಡಿಸುವದು ಸೇರಿದಂತೆ ವಿವಿಧ ಕಾರ್ಯಕ್ರಮ ಗಳನ್ನು ಪ್ರಕೋಷ್ಠದ ವತಿಯಿಂದ ಮಾಡಲಾಗುವದು ಎಂದು ಹೇಳಿದರು. ಕಲಾವಿದ ಬಿ.ಸಿ ಶಂಕರಯ್ಯ ಬಿಜೆಪಿಯ ಪಂಚನಿಷ್ಠೆಗಳಲ್ಲಿ ಸಾಂಸ್ಕøತಿಕ ರಾಷ್ಟ್ರವಾದದ ವಿಚಾರಮಂಡನೆ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಣಿ ಮಾಚಯ್ಯ, ಮೌನ, ರಾಜು ಹಾಗೂ ಕಿಗ್ಗಾಲು ಗಿರೀಶ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಹಿಳಾ ಮೋರ್ಚದ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ, ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್ ಮತ್ತಿತರರು ಇದ್ದರು. ಅರ್ಪಿತ ಹಾಗೂ ಅಖಿಲ ಪ್ರಾರ್ಥಿಸಿ ದರು. ಸಹಸಂಚಾಲಕ ಮಿಟ್ಟು ಪೂಣಚ್ಚ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.