ಮಡಿಕೇರಿ, ಏ.11: ಉಚ್ಚಿಲ ವೇ.ಮೂ. ಬ್ರಹ್ಮಶ್ರೀ ಪದ್ಮನಾಭ ತಂತ್ರಿ (73) ಅವರು ನಿನ್ನೆ ಸಂಜೆ ಮಂಗಳೂರು ಸನಿಹದ ಉಚ್ಚಿಲದ ಸ್ವಗೃಹದಲ್ಲಿ ಪರಂಧಾಮವನ್ನೈದಿದರು. ಅವರು ಹಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ದಿವಂಗತರು 2005 ಮತ್ತು 2009 ರಲ್ಲಿ ತಲಕಾವೇರಿ ಹಾಗೂ ಭಾಗಮಂಡಲ ದೇಗುಲಗಳ ಪುನರ್ ಪ್ರತಿಷ್ಠಾಪನೆ ನೆರವೇರಿಸಿದ್ದರು. ಪುನರ್ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷರಾಗಿದ್ದ ಮಾತಂಡ ಮೊಣ್ಣಪ್ಪ, ಕಾರ್ಯದರ್ಶಿಯಾಗಿದ್ದ ಜಿ.ರಾಜೇಂದ್ರ, ಓಂಕಾರೇಶ್ವರ ದೇಗುಲ ಸಮಿತಿಯ ಕಾರ್ಯ ನಿರ್ವಹಣಾಧಿಕಾರಿ ಸಂಪತ್ ಕುಮಾರ್, ಸಮಿತಿಯ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ ಸಂತಾಪ ವ್ಯಕ್ತಪಡಿಸಿದ್ದಾರೆ.