ಗೋಣಿಕೊಪ್ಪಲು, ಏ. 12: ಕೊಡಗು ಜಿಲ್ಲೆಯ ರೈತರು ಯಾವದೇ ಸೊಸೈಟಿ ಅಥವಾ ನೋಂದಾಯಿತ ಗೋದಾಮುಗಳಲ್ಲಿ ಕೃಷಿ ಉತ್ಪನ್ನವನ್ನು ದಾಸ್ತಾನಿಟ್ಟು ಬಾಂಡ್ ನೀಡಿದ್ದಲ್ಲಿ ಮೂರು ತಿಂಗಳ ಅವಧಿವರೆಗೆ ಬೆಳೆಯ ಒಟ್ಟು ಮೌಲ್ಯದ ಶೇ. 60 ರಷ್ಟು ಮೂರು ತಿಂಗಳವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲಾಗುವದು. ಇದರ ಸದುಪಯೋಗವನ್ನು ಕೃಷಿಕರು ಹೊಂದಿಕೊಳ್ಳುವಂತೆ ಗೋಣಿಕೊಪ್ಪಲು ಎಪಿಎಂಸಿ ಅಧ್ಯಕ್ಷ ಸುವಿನ್ ಗಣಪತಿ ತಿಳಿಸಿದ್ದಾರೆ.

ಗೋಣಿಕೊಪ್ಪಲು ಎಪಿಎಂಸಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ರೈತ ನೋಂದಾವಣೆ ಅಭಿಯಾನ ಕಾರ್ಯಕ್ರಮ, ರೈತರ ಭಾಗಿದಾರ ಶಿಕ್ಷಣ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಇದೇ ಸಂದರ್ಭ ಒಂದು ಹಳ್ಳಿಗೆ ತಲಾ ಮೂವರಂತೆ ಒಟ್ಟು ನೂರು ಹಳ್ಳಿಯ 300 ರೈತರಿಗೆ ತಲಾ ರೂ. 500 ಪೆÇ್ರೀತ್ಸಾಹ ಧನ ವಿತರಿಸುತ್ತಿರುವದಾಗಿ ಹೇಳಿದರು. ಆರ್‍ಟಿಸಿ ಹೊಂದಿರುವ ಕೃಷಿಕರನ್ನು ಎಪಿಎಂಸಿಯಲ್ಲಿ ನೋಂದಾವಣೆ ಮಾಡಿಕೊಳ್ಳಲಾಗುವದು. ಅಂತಹ ರೈತರಿಗೆ ವಿಮಾ ಯೋಜನೆ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ, ವರ್ತಕರ ಕ್ಷೇತ್ರದ ಕಿಲನ್ ಗಣಪತಿ, ಎಪಿಎಂಸಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಬೆಳ್ಳಿಯಪ್ಪ, ಎಪಿಎಂಸಿ ಕಾರ್ಯದರ್ಶಿ ಬಿ. ಮಹೇಶ್, ಎಪಿಎಂಸಿ ಸದಸ್ಯರುಗಳು ಉಪಸ್ಥಿತರಿದ್ದರು.