ಭಾಗಮಂಡಲ, ಏ. 13 : ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಕೆದಂಬಾಡಿ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್‍ನ ಇಂದಿನ ಪಂದ್ಯದಲ್ಲಿ ಪರ್ಲಕೋಟಿ ಹಾಗೂ ದಬ್ಬಡ್ಕ ತಂಡಗಳು ಮುಂದಿನ ಹಂತ ಪ್ರವೇಶಿಸಿವೆ.

ಇಂದು ನಡೆದ ಪಂದ್ಯದಲ್ಲಿ ಕಾನಡ್ಕ ತಂಡ 4 ವಿಕೆಟ್‍ಗೆ 25 ರನ್ ಗಳಿಸಿದರೆ, ಪಾರೆಮಜಲು 3 ವಿಕೆಟ್‍ಗೆ 29 ರನ್ ಗಳಿಸಿ 7 ವಿಕೆಟ್‍ಗಳ ಗೆಲವು ಸಾಧಿಸಿತು.

ಚೆರ್ಕನ ತಂಡ 4 ವಿಕೆಟ್‍ಗೆ 29 ರನ್ ಗಳಿಸಿದರೆ, ಕೊಂಪುಳೀರ ತಂಡ 1 ವಿಕೆಟ್‍ಗೆ 33 ರನ್ ಬಾರಿಸಿ 9 ವಿಕೆಟ್‍ಗಳ ಗೆಲವು ಸಾಧಿಸಿತು. ಪರ್ಲಕೋಟಿ 3 ವಿಕೆಟ್‍ಗೆ 64 ರನ್ ಗಳಿಸಿದರೆ, ಪಾರೆಮಜಲು 42 ರನ್ ಗಳಿಸಿ 22 ರನ್‍ಗಳ ಸೋಲು ಅನುಭವಿಸಿತು.

ಪರ್ಲಕೋಟಿ 7 ವಿಕೆಟ್‍ಗೆ 70 ರನ್ ಬಾರಿಸಿದರೆ, ಕೂಡಕಂಡಿ 3 ವಿಕೆಟ್‍ಗೆ 33 ರನ್ ಬಾರಿಸಿ 37 ರನ್‍ಗಳ ಸೋಲನುಭವಿಸಿತು.