ಚೆಟ್ಟಳ್ಳಿ, ಏ. 13: ಚೆಟ್ಟಳ್ಳಿ ಗ್ರಾಮ ಪಂಚಾಯತಿಯ ಸಮುದಾಯ ಭವನದಲ್ಲಿ ವಿಧಾನ ಪರಿಷತ್ ಸದಸ್ಯ ಎಂ. ಪಿ. ಸುನಿಲ್ ಸುಬ್ರಮಣಿ ಅವರು ಸಾರ್ವಜನಿಕ ಕುಂದು ಕೊರತೆ ಸಭೆÉ ನಡೆಸಿದರು. ಸಭೆಯಲ್ಲಿ ಪಂಚಾಯಿತಿಯ ಪ್ರಗತಿ ಪರಿಶೀಲನೆಯ ಬಗ್ಗೆ ಚರ್ಚಿಸಲಾಗಿ ಸರ್ಕಾರದಿಂದ ಬಂದ ಅನುದಾನ ಬಳಕೆಯಾದ ಬಗ್ಗೆ, ನೀರಿನ ಸಮಸ್ಯೆ ಬಗ್ಗೆ ಚರ್ಚಿಸ ಲಾಯಿತು. ಶೌಚಾಲಯ ಕಾಮಗಾರಿಗೆ ಶಾಸಕರ ನಿಧಿಯಿಂದ ಅನುದಾನ, ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಜಾಗ ಮಂಜೂರಾತಿಗಾಗಿ ಮನವಿ, ವಸತಿ ರಹಿತ ಕೂಲಿ ಕಾರ್ಮಿಕರಿಗೆ ನಿವೇಶನ ಮಂಜೂರಾತಿ, ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಡಲು ಮನವಿ, ಹಾಗೂ ಗ್ರಾಮದ ಹದಗೆಟ್ಟ ರಸ್ತೆಗಳ ದುರಸ್ತಿಗೆ ಶಾಸಕರ ಬಳಿ ಅಧ್ಯಕ್ಷೆ ಪಿ. ವಿ. ವತ್ಸಲ ಅವರು ಮನವಿ ಪತ್ರ ಸಲ್ಲಿಸಿದರು. ಸುನಿಲ್ ಸುಬ್ರಮಣಿ ಮಾತನಾಡಿ ಚೆಟ್ಟಳ್ಳಿ ಪಂಚಾಯಿತಿಯ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡುವದರಿಂದ ಬಿಡಿಸಿ, ವಸತಿ ರಹಿತರಿಗೆ ಮಂಜೂರು ಮಾಡಿ ಕೊಡಬೇಕೆಂದು ಹಾಗೂ ಸಹಕಾರ ಸಂಘದ ಒತ್ತಿನಲ್ಲಿರುವ ಜಾಗ ವಿವಾದವನ್ನು ಇತ್ಯರ್ಥ ಪಡಿಸಿ ಕೊಡಬೇಕೆಂದು ಮನವಿ ಸಲ್ಲಿಸಿದರು, ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು
ಸಭೆಯಲ್ಲಿ ಸಂಬಧಪಟ್ಟ ಇಲಾಖಾಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಹಾಜರಿದ್ದರು, ಪಿ.ಡಿ.ಓ. ವಿಶ್ವನಾಥ್ ಸ್ವಾಗತಿಸಿ, ವಂದಿಸಿದರು.