ಮಡಿಕೇರಿ, ಏ. 12: ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕಬೆ ಪಟ್ಟಣದಲ್ಲಿ ಪೈನೇರಿ ಮಸೀದಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಸೀದಿ ತಡೆಗೋಡೆಯ ದ್ವಾರವನ್ನು ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಹಾಗೂ ಕೇರಳದ ಪಂಡಿತರು ಮತ್ತು ಸಿರಾಜುಲ್ ಹುದಾ ಮುಖ್ಯಸ್ಥ ಪೇರೋಡ್ ಅಬ್ದುಲ್ ರೆಹಮಾನ್ ಸಖಾಫಿ ಉದ್ಘಾಟಿಸಿದರು.
ಮಾಜಿ ಲೋಕಸಭಾ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಅವರ ಅನುದಾನದಲ್ಲಿ ದ್ವಾರವನ್ನು ನಿರ್ಮಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ನಿರ್ದೇಶಕ ಶೌಕತ್ ಆಲಿ ತಿಳಿಸಿದರು. ಕುಂಜಿಲ ಪೈನೇರಿ ಜಮಾಅತ್‍ನ ಅಧ್ಯಕ್ಷ ಮಹಮ್ಮದ್ ಹಾಜಿ, ಮರ್ಕಝ್ ಸಂಸ್ಥೆಯ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ, ಪ್ರಮುಖರಾದ ಮಹಮ್ಮದ್ ಮುಸ್ಲಿಯಾರ್ ಹಾಗೂ ಉಲಮಾಗಳು, ಪೈನೇರಿ ಜಮಾಅತ್ ಸಮಿತಿ ಸದಸ್ಯರು ಹಾಜರಿದ್ದರು.