ನಾಪೆÇೀಕ್ಲು, ಏ. 13: ಕಳೆದೆರಡು ವರ್ಷಗಳಿಂದ ತಮ್ಮ ಹಾಡಿಗೆ ತೆರಳಲು ರಸ್ತೆ ನೀಡಬೇಕೆಂದು ಪ್ರತಿಭಟಿಸುತ್ತಿದ್ದ ಯವಕಪಾಡಿ ಗ್ರಾಮದ ಕಬ್ಬಿಣಕಾಡು ಅಡಿಯ ಜನಾಂಗ ಈಗ ನಡೆದಾಡಲು ತಮ್ಮ ಹಾಡಿಗಳಿಗೆ ತೆರಳಲು ರಸ್ತೆಯಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಈ ಹಿಂದೆ ತಾಮರ ರೆಸಾರ್ಟ್ ಮೂಲಕ ತೆರಳುತ್ತಿದ್ದ ಇವರು ಇತ್ತೀಚೆಗೆ ರೆಸಾರ್ಟ್ ಮಧ್ಯ ಭಾಗಕ್ಕಾಗಿ ತಾವು ತೆರಳುವ ಸಂದರ್ಭ ತಮಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ರಸ್ತೆಯನ್ನು ಪ್ರತ್ಯೇಕಿಸಿ ಕೊಡುವಂತೆ ಸಂಬಂಧಿಸಿದವರಿಗೆ ದೂರು ನೀಡಿದ್ದರು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ಭೇಟಿ ನೀಡಿದ ಸಂದರ್ಭ ಭಾಲವೃದ್ಧ ಸಮೇತರಾಗಿ ಸಚಿವರ ಕಾಲಿಗೆರಗುವ ಮೂಲಕ ತಮ್ಮ ಅಸಹಾಯಕತೆಯನ್ನು ತೋರಿದರು. ಇದಕ್ಕೆ ಸ್ವಂಧಿಸಿದ ಸಚಿವರು ಸ್ಥಳದಲ್ಲಿದ್ದ ನಾಪೆÇೀಕ್ಲು ಕಂದಾಯ ಪರಿವೀಕ್ಷಕರಿಗೆ ಸರ್ವೆ ಕಾರ್ಯನಡೆಸಿ ರಸ್ತೆ ತೆರವಿಗೆ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದ್ದರು. ಅದರಂತೆ ಈಗ ಸರ್ವೆ ನಡೆಸಿದಾಗ ರೆಸಾರ್ಟ್‍ಗೆ ತೆರಳುವ ರಸ್ತೆ ಸರಕಾರಿ ರಸ್ತೆಯಲ್ಲ ಎಂಬದಾಗಿ ತಿಳಿದುಬಂದಿದೆ. ಸರ್ವೆ ನಡೆದರೆ ರಸ್ತೆ ದೊರೆಯುತ್ತದೆ ಎಂದು ನಂಬಿದ ಸುಮಾರು 300 ರಿಂದ 400 ಜನರು ತಮ್ಮ ಹಾಡಿಗೆ ತೆರಳಲು ರಸ್ತೆಯಿಲ್ಲದೆ ದಿಕ್ಕು ಕಾಣದಾಗಿದ್ದಾರೆ.