ಗೋಣಿಕೊಪ್ಪಲು, ಏ. 12: ಕೇವಲ ಹಣಗಳಿಸುವದೇ ಕಾಯಕವಾಗಬಾರದು. ತಮ್ಮ ದುಡಿಮೆಯಲ್ಲಿ ಕೆಲವು ಪಾಲನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭ್ಯುದಯಕ್ಕೆ ಕೊಡುಗೆ ನೀಡುವ ಮನೋಭಾವ ರೂಢಿಸಿಕೊಳ್ಳಬೇಕು. ವಿಶೇಷಚೇತನರನ್ನು ಕಡೆಗಣಿಸುವದು ತರವಲ್ಲ. ತನ್ನ ಸಹಪಾಠಿ ವಿಕಲ ಚೇತನರೋರ್ವರು ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಗೌರವಾನ್ವಿತ ಉದ್ಯೋಗ ಸಂಪಾದಿಸಿದ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಬಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ವಿವರಿಸಿದರು.

ಪಾಲಿಬೆಟ್ಟ ಚೆಷೈರ್ ಹೋಮ್‍ನಲ್ಲಿ ಇತ್ತೀಚೆಗೆ ಮುಗಿದ 18ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿಕಲಚೇತನ ಮಕ್ಕಳಿಂದ ಆಕರ್ಷಕ ಕಾರ್ಯಕ್ರಮ ಜರುಗಿತು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸ್ವಾಗತ ಸಂಸ್ಥೆಯ ಅಧ್ಯಕ್ಷ ಚೆಪ್ಪುಡಿರ ಸುಭಾಶ್ ಮುತ್ತಣ್ಣ, ಪ್ರಾರ್ಥನೆ ಮುಮ್ತಾಜ್, ನಿರೂಪಣೆ ಗೀತಾ ನಾಯ್ಡು, ಪ್ರಾಸ್ತಾವಿಕ ಮುಖ್ಯ ಶಿಕ್ಷಕ ಶಿವರಾಜ್ ಹಾಗೂ ಖುಷಿ ಕಾರ್ಯಪ್ಪ ವಂದನಾರ್ಪಣೆ ಮಾಡಿದರು.