ವೀರಾಜಪೇಟೆ, ಏ. 12: ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲೆ ಇವರ ವತಿಯಿಂದ ಸಂವಿಧಾನ ಶಿಲ್ಪಿ ಬಾಬಸಾಹೇಬ್ ಡಾ ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆಯ ಅಂಗವಾಗಿ ಜನ ಜಾಗೃತಿ ಸಮಾವೇಶವನ್ನು ಬೇಳೂರು ಗ್ರಾಮದ ಹೆಮ್ಮಾಡುವಿನಲ್ಲಿ ಆಚರಿಸಲಾಗುವದು ಎಂದು ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸತೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಭೆಯ ಅಧ್ಯಕ್ಷತೆಯನ್ನು ವಿಭಾಗೀಯ ಸಂಚಾಲಕ ಹೆಚ್. ಎಸ್. ಕೃಷ್ಣಪ್ಪ ವಹಿಸಲಿದ್ದಾರೆ, ಸಭೆಯ ಉದ್ಘಾಟನೆಯನ್ನು ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್, ಮುಖ್ಯ ಭಾಷಣಕಾರರಾಗಿ ಮೈಸೂರಿನ ಡಾ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕÀ ಕೆ.ಬಿ. ನಾಗೇಶ್, ಅತಿಥಿಗಳಾಗಿ ಡಿವೈಎಸ್ಪಿ ನಾಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜ, ಬೆಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಡಿ ಮನೋಜ್, ಸುದಾ, ದಿವಿನ್ ತಿಮ್ಮಯ್ಯ, ಜಿಲ್ಲಾ ಸಂಚಾಲಕಿ ಎಸ್. ಓಮನ ಉಪಸ್ಥಿತಿತರುವರು ಎಂದರು. ತಾ. 14ರಂದು ಪೂರ್ವಾಹ್ನ 10 ಗಂಟೆಗೆ ಹುದಿಕೇರಿಯಿಂದ ಬೆಳೂರು ಗ್ರಾಮದವರೆಗೆ ಮೆರವಣಿಗೆಯಲ್ಲಿ ತೆರಳಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ವಿಭಾಗೀಯ ಸಂಚಾಲಕ ಹೆಚ್.ಎಸ್. ಕೃಷ್ಣಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಗೋಪಾಲ್ರಾಜ್, ಜಿಲ್ಲಾ ಮಹಿಳಾ ಸಂಚಾಲಕಿ ಓಮನ ಕಾರ್ಯಕರ್ತ ರೋಷನ್ ಉಪಸ್ಥಿತರಿದ್ದರು.