ಮಡಿಕೇರಿ, ಏ. 13 : ಪ್ರಬುದ್ಧ ನೌಕರರ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ತಾ. 14ರಂದು (ಇಂದು) ನಗರದಲ್ಲಿ ವಿಶ್ವ ಜ್ಞಾನ ದಿನವನ್ನು ಆಚರಿಸಲಾಗುತ್ತಿದೆ

ನಗರದ ಮೈತ್ರಿ ಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಉದ್ಘಾಟಿಸಲಿ ದ್ದಾರೆ. ವಿಶೇಷ ಆಹ್ವಾನಿತ ತುಮಕೂರಿನ ಹಿರಿಯ ಸಿವಿಲ್ ನ್ಯಾಯಾಧೀಶ ಬಾಬಾಸಾಹೇಬ್ ಜಿನರಾಳ್ಕರ್ “ಮನುವಾದ ಮತ್ತು ಅಂಬೇಡ್ಕರ್ ವಾದ” ವಿಷÀಯದ ಕುರಿತು ವಿಚಾರ ಮಂಡಿಸಲಿದ್ದಾರೆ. ಮೈಸೂರು ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿ. ಶಣ್ಮುಗಂ ಅವರು “ಪ್ರಸಕ್ತ ಭಾರತದ ಆರ್ಥಿಕ ವ್ಯವಸ್ಥೆ ಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ ತತ್ವಗಳ ಪ್ರಸ್ತುತತೆ”, ಬಹುಜನ್ ಇಂಟಲೆಕ್ಚುವಲ್‍ನ ಪ್ರಮುಖರಾದ ಡಾ. ಸಯ್ಯದ್ ರೋಷನ್ ಮುಲ್ಲಾ, “ಅಸ್ಪ್ರಶ್ಯತೆ ಮತ್ತು ಜಾತಿ ನಿರ್ಮೂಲನೆಯಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಾತ್ರ” ಹಾಗೂ ಅಂಬೇಡ್ಕರ್ ವಾದಿಗಳಾದ ಜಯಕುಮಾರ್‍ರವರು “ಭಾರತದ ಮೂಲ ನಿವಾಸಿಗಳ ಇತಿಹಾಸ ಹಾಗೂ ಜಾತಿಯ ಹುಟ್ಟು” ವಿಷಯದ ಕುರಿತು ಮಾತನಾಡಲಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಉಪ ವೈದ್ಯಾಧಿಕಾರಿ ಡಾ. ಹೆಚ್.ವಿ. ದೇವದಾಸ್ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿರುವ ಡಾ. ಅಂಬೇಡ್ಕರ್ ಭವನದಿಂದ ಆರಂಭಗೊಳ್ಳುವ ಬೈಕ್ ರ್ಯಾಲಿ ಮತ್ತು ಮೆರವಣಿಗೆಯನ್ನು ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ಸತ್ಯನ್ ಹಾಗೂ ಪ್ರಬುದ್ಧ ನೌಕರರ ಒಕ್ಕೂಟದ ಸಲಹೆಗಾರ ಹೆಚ್.ಎಲ್.ದಿವಾಕರ್ ಉದ್ಘಾಟಿಸಲಿದ್ದಾರೆ.