ಮಡಿಕೇರಿ, ಏ. 12: ಕಾನೂನಿನ ಬಗ್ಗೆ ಅರಿವು ಪಡೆದಿದ್ದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದಾಗಿದೆ. ಆದ್ದರಿಂದ ಸಂವಿಧಾನದ ಕಾನೂನಿನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ತಿಳುವಳಿಕೆ ಅಗತ್ಯ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್‍ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸಹಕಾರ ತರಬೇತಿ ನಿರ್ವಹಣಾ ಸಂಸ್ಥೆ (ಕೆಐಸಿಎಂ) ವತಿಯಿಂದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಕಾರದಲ್ಲಿ ನಗರದ ಕೆಐಸಿಎಂ ಸಭಾಂಗಣದಲ್ಲಿ ಕಾನೂನು ನೆರವು, ಜನತಾ ನ್ಯಾಯಾಲಯ, ಫೋಕ್ಸೋ ಕಾಯಿದೆ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶವು ವಿವಿಧತೆಯಲ್ಲಿ ಏಕತೆ ಯನ್ನು ಹೊಂದಿದ್ದು, ಪ್ರತಿಯೊಬ್ಬರು ಸಂವಿಧಾನಕ್ಕೆ ಬದ್ಧವಾಗಿ ನಡೆದು ಕೊಳ್ಳಬೇಕು. ಸ್ವಾತಂತ್ರ್ಯಕ್ಕಾಗಿ ನಡೆದ ರಾಷ್ಟ್ರೀಯ ಹೋರಾಟಕ್ಕೆ ಸ್ಪೂರ್ತಿ ನೀಡಿ ಉದಾತ್ತ ಆದರ್ಶ ಗಳನ್ನು ಗೌರವಿಸಿ ಅನುಸರಿಸುವುದು, ಹಾಗೆಯೇ ದೇಶದ ಅರಣ್ಯ ಸಂಪತ್ತು, ನದಿ, ಸರೋವರ, ವನ್ಯ ಜೀವಿಗಳನ್ನು ಸಂರಕ್ಷಿಸುವದು ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.

ನ್ಯಾಯಾವಾದಿಗಳಾದ ಬಿ.ಕೆ. ಶ್ರೀಧರ್ ಮಾತನಾಡಿ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಪಡೆಯುವು ದರ ಜೊತೆಗೆ ಕರ್ತವ್ಯಗಳನ್ನು ಪಾಲಿಸು ವುದು ಪ್ರತಿಯೊಬ್ಬರ ಜವಾಬ್ದಾರಿ ಯಾಗಿದೆ. ಆ ನಿಟ್ಟಿನಲ್ಲಿ ನಡೆದುಕೊಳ್ಳ ಬೇಕು ಎಂದು ಅವರು ಹೇಳಿದರು.

ರಾಜ್ಯ ಸಹಕಾರ ತರಬೇತಿ ನಿರ್ವಹಣಾ ಸಂಸ್ಥೆಯ ಪ್ರಾಂಶುಪಾಲ ರಾದ ಆರ್.ಎಸ್. ರೇಣುಕಾ ಅವರು ಮಾತನಾಡಿ ಸಂವಿಧಾನದ ಆಶಯ ದಂತೆ ಪ್ರತಿಯೊಬ್ಬರೂ ನಡೆದುಕೊಳ್ಳ ಬೇಕು. ಕಾನೂನನ್ನು ಗೌರವಿಸಬೇಕು. ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು. ಎ.ಟಿ. ಪವಿತ್ರ ನಿರೂಪಿಸಿದರು.