ವೀರಾಜಪೇಟೆ, ಏ. 13: ತನ್ನ ಸೇವೆಯ ಶ್ರದ್ಧೆ, ಪ್ರಾಮಾಣಿಕತೆ ಕರ್ತವ್ಯ ನಿಷ್ಠೆಯಿದ್ದರೆ ಯಾವದೇ ಕೆಲಸದಲ್ಲಿ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಬೆಂಗಳೂರಿನ ಎವರ್ ಸ್ಟೋನ್ ಕಂಪೆನಿಯ ಪಾಲುದಾರ ಹಾಗೂ ಜನರಲ್ ಕೌನ್ಸಿಲ್ ಪುಗ್ಗೇರ ದಿನೇಶ್ ದೇವಯ್ಯ ಅಭಿಪ್ರಾಯ ಪಟ್ಟರು.

ಭಾರತದ ದೇಶದ ಉತ್ತಮ 100 ಮಂದಿ ಕಾನೂನು ಸಲಹೆಗಾರರ ಪೈಕಿ ಮೊದಲಿಗರು ಎಂಬ ಪ್ರಶಸ್ತಿ ಪಡೆದ ಪುಗ್ಗೇರ ದಿನೇಶ್ ದೇವಯ್ಯ ಅವರನ್ನು ದೇವಣಗೇರಿ ಪುಗ್ಗೇರ ಕುಟುಂಬದ ಬೈತೂರಪ್ಪ ಸಂಘದಿಂದ ಶಾಲು ಹೊದಿಸಿ, ಸನ್ಮಾನ ಮಾಡಿದಾಗ ಮಾತನಾಡಿದ ಅವರು ಸುಮಾರು 25 ವರ್ಷಗಳ ಪರಿಶ್ರಮದ ಸೇವೆ ಪ್ರಶಸ್ತಿಗೆ ಕಾರಣವಾಯಿತು ಎಂದರು.

ಸಂಘದ ಅಧ್ಯಕ್ಷ ಪುಗ್ಗೇರ ಟಿ. ಅಯ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಕಾರ್ಯಾಧ್ಯಕ್ಷ ಪುಗ್ಗೇರ ನಂದಾ ಗಣಪತಿ, ಗೌ:ಕಾರ್ಯದರ್ಶಿ ಪ್ರವೀಣ್ ಅಯ್ಯಪ್ಪ, ಬೈತೂರಪ್ಪ ಸಂಘದ ಮಾಜಿ ಅಧ್ಯಕ್ಷ ಪಿ.ಎ. ಪೊನ್ನಪ್ಪ, ಬಿಲ್ಡಿಂಗ್ ಫಂಡ್ ಅಧ್ಯಕ್ಷ ಪುಗ್ಗೇರ ರಂಜಿ ದೇವಯ್ಯ ಉಪಸ್ಥಿತರಿದ್ದರು.

ಜಿ.ಸಿ. ಪವರ್ ಲಿಸ್ಟ್ ಆಫ್ ಇಂಡಿಯಾ ಸಂಸ್ಥೆ ಈಚೆಗೆ ನಡೆಸಿದ ಸರ್ವೆ ಸಮೀಕ್ಷೆಯಲ್ಲಿ ದೇಶದ ಉತ್ತಮ ಕಾನೂನು ಸಲಹೆಗಾರರಲ್ಲಿ ದಿನೇಶ್ ದೇವಯ್ಯ ಮೊದಲ ಸ್ಥಾನಕ್ಕೆ ಆಯ್ಕೆಯಾಗಿದ್ದರು.

ಇವರು ಹಾಂಕಾಂಗ್ ಅಂತರರಾಷ್ಟ್ರೀಯ ಜರ್ನಲ್ ಪ್ರಕಟಣೆಯ ಇಂಡಿಯಾ ಬಿಸಿನೆಸ್ ಲಾ ಜರ್ನಲ್ ಸಂಪಾದಕೀಯ ಮಂಡಳಿಯ ಸದಸ್ಯರು ಆಗಿದ್ದಾರೆ.