ವೀರಾಜಪೇಟೆ, ಏ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರು ಇಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಯಾಗಿದೆ. ಇಂದು ಅವರು ಜಿಲ್ಲಾ ಉಪವಿಭಾಗಾಧಿಕಾರಿ ನಂಜುಡೇಗೌಡ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿರುªತಿಳಿಸಿರುವದಾಗಿ ಉಪವಿಭಾಗಾಧಿ ಕಾರಿಗಳು ‘ಶಕ್ತಿ’ಗೆ ಖಚಿತಪಡಿಸಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತ ಪಡೆದಿದ್ದು ಮೊದಲ ಎರಡೂವರೆ ವರ್ಷಗಳು ಎಂ.ಕೆ.ದೇಚಮ್ಮ ಅಧ್ಯಕ್ಷ ಪದವಿಯಲ್ಲಿದ್ದರು. ಆದರೆ ತಾ: 11-4-2016ರಂದು ಅವಿರೋಧವಾಗಿ ಆಯ್ಕೆಯಾಗಿದ್ದ ಸಚಿನ್ ಕುಟ್ಟಯ್ಯ Àದಾಗಿ ಪತ್ರದಲ್ಲಿ ಅಧ್ಯಕ್ಷ ಪದವಿಯಲ್ಲಿ ಒಂದು ವರ್ಷಕ್ಕೆ ಸೀಮಿತಗೊಂಡಂತೆ ಒಪ್ಪಂದದಂತೆ ಮುಂದುವರೆದಿದ್ದರು. ಏಪ್ರಿಲ್11ಕ್ಕೆ ಪದವಿಯ ಅವಧಿ ಮುಗಿದಿರುವ ದರಿಂದ ಭಾರತೀಯ ಜನತಾ ಪಾರ್ಟಿಯ ವರಿಷ್ಠರ ನಿರ್ದೇಶನ ದಂತೆ ಪದವಿಗೆ ರಾಜೀನಾಮೆ ನೀಡಿದ್ದಾರೆನ್ನಲಾಗಿದೆ. ಈಗ ಪಕ್ಷದ ವರಿಷ್ಠರು ಬಿಜೆಪಿ ಕಾರ್ಯಕರ್ತರು ಹಾಗೂ

(ಮೊದಲ ಪುಟದಿಂದ) ಪಂಚಾಯಿತಿಯ ಹಿರಿಯ ಸದಸ್ಯರೊಬ್ಬರನ್ನು ಹದಿನೆಂಟು ತಿಂಗಳ ಅವಧಿಗೆ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಬೇಕಿದ್ದು, ತಾಲೂಕು ತಹಶೀಲ್ದಾರ್ ಅವರ ಚುನಾವಣಾ ಪ್ರಕ್ರಿಯೆಯ ನಂತರ ಈ ಹಿರಿಯ ಸದಸ್ಯರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಧ್ಯಕ್ಷ ಪದವಿಗೆ ಈ ಹಿಂದೆಯೇ ಪಕ್ಷ ಅಭ್ಯರ್ಥಿಯನ್ನು ಗೊತ್ತು ಪಡಿಸಿದ್ದರಿಂದ ಆಯ್ಕೆಗೆ ಪಕ್ಷದ ಕಾರ್ಯಕರ್ತರ ನಡುವೆ ಯಾವದೇ ಗೊಂದಲ ಭಿನ್ನಾಭಿಪ್ರಾಯವಿಲ್ಲ ಎನ್ನುವದು ಸ್ಪಷ್ಟವಾಗಿದೆ. ಆದ್ದರಿಂದ ಈ ಪದವಿಗೆ ಯಾರೂ ಸ್ಪರ್ಧಿಸದೆ ಅವಿರೋಧ ಆಯ್ಕೆ ನಡೆಯುವದು ಬಹತೇಕ ಖಚಿತವಾಗಿದೆ.

ಈಗ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 16 ಸ್ಥಾನಗಳ ಪೈಕಿ 10 ಮಂದಿ ಬಿಜೆಪಿ ಸದಸ್ಯರುಗಳು ಎರಡು ಕಾಂಗ್ರೇಸ್, 4 ಜೆಡಿಎಸ್ ಪಕ್ಷದ ಸದಸ್ಯರಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷದ ಮೂರು ಮಂದಿ ನಾಮಕರಣ ಸದಸ್ಯರಿದ್ದಾರೆ. ಪಟ್ಟಣ ಪಂಚಾಯಿತಿಗೆ ಮೂರೂವರೆ ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ 9 ಮಂದಿ ಬಿಜೆಪಿ ಪಕ್ಷದಿಂದ ಗೆದ್ದು ಬಂದಿದ್ದರು. ಆದರೆ ಈಗ ಉಪಾಧ್ಯಕ್ಷ ಸ್ಥಾನದಲ್ಲಿರುವ ತಸ್ನೀಂಅಕ್ತರ್ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪಕ್ಷೇತರವಾಗಿ ಗೆದ್ದು ಬಂದು ನಂತರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದರಿಂದ ಬಿಜೆಪಿ ಸದಸ್ಯರುಗಳ ಸಂಖ್ಯೆಯ ಬಲ ಹತ್ತಕ್ಕೆ ಏರಿತ್ತು. ನಾಮಕರಣ ಸದಸ್ಯರುಗಳು ಸೇರಿದಂತೆ ಈಗ ಸದಸ್ಯರುಗಳ ಒಟ್ಟು ಸಂಖ್ಯೆ 19 ಇದೆ.