ಮಡಿಕೇರಿ: ಆದಿವಾಸಿಗಳು ಹಾಗೂ ದುರ್ಬಲರು ಸ್ವತಂತ್ರವಾಗಿ ಬದುಕಲು ಬಯಸುವುದನ್ನು ಅರಗಿಸಿಕೊಳ್ಳಲಾಗದ ಬಲಾಢ್ಯರು ದಿಡ್ಡಳ್ಳಿಯಲ್ಲಿ ನೆಲೆ ನಿಂತಿರುವ ನಿರಾಶ್ರಿತರ ಗುಡಿಸಲುಗಳ ಮೇಲೆ ಗುಂಡು ಹಾರಿಸಿ, ಕರಪತ್ರಗಳನ್ನು ಎಸೆಯುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡುತ್ತಿದ್ದಾರೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಆದಿವಾಸಿ ಮುಖಂಡರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖ ಅಮಿನ್ ಮೊಹಿಸಿನ್, ತಾ.10 ರಂದು ದಿಡ್ಡಳ್ಳಿಯಲ್ಲಿ ನಡೆದ ಗುಂಡಿನ ಧಾಳಿ ಪ್ರಕರಣವನ್ನು ಖಂಡಿಸಿದರು. ಪೆÀÇಲೀಸರ ಸರ್ಪಗಾವಲು ಹಾಗೂ ಗುಪ್ತಚರ ಇಲಾಖೆಯ ನಿಗಾದಲ್ಲಿ ಪೆÇಲೀಸ್ ಚೆಕ್ ಪೆÇೀಸ್ಟ್‍ಗಳನ್ನು ರಚಿಸಲಾಗಿದ್ದರೂ ಆಗಂತುಕರು ದಿಡ್ಡಳ್ಳಿಯಲ್ಲಿ ಗುಂಡಿನ ಧಾಳಿ ನಡೆಸಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.

ಕೊಡಗು ಜಿಲ್ಲೆಯಲ್ಲಿ ಜೀತ ಪದ್ಧತಿ ಇಲ್ಲವೆಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಬಡವರು ಹಾಗೂ ದುರ್ಬಲರ ಧೈರ್ಯವನ್ನು ಮತ್ತಷ್ಟು ಕುಗ್ಗಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಆದಿವಾಸಿ ಮುಖಂಡ ಬಿ.ಕೆ.ಅಪ್ಪು ಮಾತನಾಡಿ,

ಬಲಾಢ್ಯರಿಂದ ದಾಳಿ ಆರೋಪ

(ಮೊದಲ ಪುಟದಿಂದ) ಜಿಲ್ಲೆಯಲ್ಲಿರುವ ಶಾಸಕರುಗಳಿಗೆ ಜನಪರ ಕಾಳಜಿ ಇದ್ದಿದ್ದರೆ ದುರ್ಬಲರು ಹಾಗೂ ಆದಿವಾಸಿಗಳ ಹೋರಾಟದ ಪರವಾಗಿ ನಿಂತು ನಿವೇಶನ ಹಂಚಿಕೆ ಮಾಡುವದರಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಚೆರಿಯಪರಂಬು ಪೈಸಾರಿಯ ಕೆ.ಎ.ಶರೀಫ ಮಾತನಾಡಿ, ಹಕ್ಕುಪತ್ರ ಇಲ್ಲ ಎನ್ನುವ ಕಾರಣಕ್ಕಾಗಿ ಚೆರಿಯಪರಂಬು ನಿವಾಸಿಗಳಿಗೆ ವಾಸದ ದೃಢೀಕರಣ ಪತ್ರ ನೀಡದಿರುವದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಬಹುಜನ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಮೊಣ್ಣಪ್ಪ ಮಾತನಾಡಿ, ಜಿಲ್ಲಾಡಳಿತ ರಾಜಕೀಯ ಪ್ರೇರಿತವಾಗಿದ್ದು, ಬಡವರ ಪರ ಕಾಳಜಿ ಇಲ್ಲವೆಂದು ಆರೋಪಿಸಿದರು. ಆದಿವಾಸಿ ಹೋರಾಟಗಾರ ಸ್ವಾಮಿ ಅಯ್ಯಪ್ಪ, ಅಲ್ಲಾರಂಡ ವಿಠಲ ನಂಜಪ್ಪ ಹಾಜರಿದ್ದರು.