ವೀರಾಜಪೇಟೆ, ಏ. 12: ಯಾವದೇ ದಾಖಲಾತಿಗಳಿಲ್ಲದೆ ಕೊಡಗು ಜಿಲ್ಲೆಯಾದ್ಯಂತ ಅಕ್ರಮ ಬಾಂಗ್ಲಾ ದೇಶಿಗರು ತೋಟ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಹಿಂದೂ ಜಾಗರಣ ವೇದಿಕೆ ಇಲ್ಲಿನ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.ಹಿಂದೂ ಜಾಗರಣ ವೇದಿಕೆಯ ನಗರ ಅಧ್ಯಕ್ಷ ಎಂಬಿ ಚಂದ್ರನ್ ಮಾತನಾಡಿ ಬಾಂಗ್ಲಾ ದೇಶಿಗರಿಗೆ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಸ ದೃಢೀಕರಣ ಪತ್ರ ಎಲ್ಲವು ಸುಲಭವಾಗಿ ಏಜೆಂಟ್ಗಳ ಮೂಲಕ ಲಭಿಸುತ್ತಿದೆ. ವೀರಾಜಪೇಟೆ ತಾಲೂಕಿನ ತಾರಿಕಟ್ಟೆಯಲ್ಲಿ ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿರುವ ದಂಧೆಯ
(ಮೊದಲ ಪುಟದಿಂದ) ಪ್ರಮುಖ ಆರೋಪಿ ಖಲಿಮುಲ್ಲಾನನ್ನು ಕೂಡಲೇ ಬಂಧಿಸಿ ಇದರ ಹಿಂದಿರುವ ಜಾಲವನ್ನು ಭೇದಿಸಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ಆಗ್ರಹಿಸಿದರು.
ಇದೇ ಸಂದರ್ಭ ವಿವಿಧ ಪ್ರಮುಖರಾದ ಸೀತಾರಾಂ ಭಟ್, ಪೊನ್ನಪ್ಪ ರೈ, ಜೀವನ್, ಐನಂಡ ಜಪ್ಪು ಅಚ್ಚಪ್ಪ, ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.