ಶ್ರೀಮಂಗಲ, ಏ. 12: ಕುಟುಂಬದಲ್ಲಿ ಶಾಂತಿ, ನೆಮ್ಮದಿಗೆ ನಂಬಿಕೆ ಮುಖ್ಯ. ಆಸೆಗಳು ಹೆಚ್ಚಾದರೆ, ಪೂರೈಕೆಯಾಗದಿದ್ದರೆ ನೆಮ್ಮದಿ ಕೆಡುತ್ತದೆ. ಹಾಸಿಗೆ ಇರುವಷ್ಟು ಕಾಲು ಚಾಚಬೇಕು. ಆಗ ಮನೆ ನೆಮ್ಮದಿಯ ತಾಣವಾಗುತ್ತದೆ. ಮನೆ ‘ಮ’ ಎಂದರೆ ಮನಸ್ಸು, ‘ನೆ’ ಎಂದರೆ ನೆಮ್ಮದಿ. ಹಾಗೆ ನಮ್ಮ ಮನೆಯನ್ನು ಇಟ್ಟುಕೊಳ್ಳಬೇಕು. ಭಾರತೀಯ ಸಂಸ್ಕøತಿ, ಪರಂಪರೆಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕøತಿಯತ್ತ ಒಲವು ತೋರುತ್ತಿರುವದು ಇಂದಿನ ಯುವ ಪೀಳಿಗೆಯಲ್ಲಿ ಅಶಾಂತಿಗೆ ಕಾರಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಭೋದನ್ನ ರಾಷ್ಟ್ರೀಯ ಮುಖ್ಯಸ್ಥ ಸು. ರಾಮಣ್ಣ ಅಭಿಪ್ರಾಯಪಟ್ಟರು.
ಕಾನೂರು ಮಹಾವಿಷ್ಣು ದೇವಾಲ ಯದ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಉಪದೇಶ ನೀಡಿದರು.
ಮನೆಯಲ್ಲಿ ಸರ್ವ ಸದಸ್ಯರು ಒಟ್ಟಾಗಿ ಊಟ ಮಾಡಬೇಕು. ಇದರಿಂದ
(ಮೊದಲ ಪುಟದಿಂದ) ಭಾಂದವ್ಯ ವೃದ್ದಿಸುತ್ತದೆ. ಹಾಗೂ ಮನೆಯವರನ್ನು ಒಂದುಗೂಡಿಸುತ್ತದೆ. ಮನೆಯಲ್ಲಿ ಒಬ್ಬರು ಎಲ್ಲರ, ಹಾಗೂ ಎಲ್ಲರು ಒಬ್ಬರ ಕಾಳಜಿ ತೋರುವಂತೆ ಮಾಡುತ್ತದೆ ಎಂದು ಹೇಳಿದರು. ಪುರಾಣದ ನಂಬಿಕೆಯನ್ನು ತಿರಸ್ಕರಿಸಬಾರದು. ಮೂಲ ನಂಬಿಕೆಗೆ ಅಪಚಾರ ಮಾಡಬಾರದು. ಪಾಶ್ಚಿಮಾತ್ಯ ಸಂಸ್ಕøತಿಯನ್ನು ನಕಲು ಮಾಡುವದರಿಂದ ಶ್ರೇಷ್ಠವಾಗುವದಿಲ್ಲ. ಬದಲಿಗೆ ನಮ್ಮತನವನ್ನು ನಾವು ಕಳೆದುಕೊಳ್ಳುತ್ತೇವೆ ಎಂದು ಸು. ರಾಮಣ್ಣ ಅವರು ಎಚ್ಚರಿಸಿದರು.
ಮನೆಯಲ್ಲಿ, ಹಿರಿಯರಿಗೆ ನಮ್ಮನ್ನು ಗೌರವ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಕಿರಿಯರಿಗೆ ನಮಗೆ ಹಿರಿಯರು ಹೊರೆಯಲ್ಲ ಇವರು ವರ ಎನ್ನುವ ಭಾವನೆ ಬರಬೇಕು. ಆಸ್ತಿ, ಹಣ, ಸಂಪತ್ತು, ಒಂಟಿ ಜೀವನ ನೆಮ್ಮದಿಯನ್ನು ಕೆಡಿಸುತ್ತದೆ ಎಂದು ಅಭಿಪ್ರಾಯ ಪಟ್ಟ ಅವರು, ನೆಮ್ಮದಿ ಇದ್ದ ಮನೆಯಲ್ಲಿ ಪ್ರೀತಿ, ವಾತ್ಸಲ್ಯ, ಸಮಾಧಾನ, ಸಂಬಂಧ, ಆರೋಗ್ಯ ಇರುತ್ತದೆ ಎಂದು ಹೇಳಿದರು.
ದೇಶದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ಮನೆಯ ಪರಂಪರೆ, ಸಂಸ್ಕøತಿ, ಆಹಾರ ಪದ್ಧತಿ, ಬೆಳಗ್ಗೆ ಏಳುವ ಸಮಯ ವ್ಯತ್ಯಾಸವಾಗುತ್ತಿರುವದು ಮುಖ್ಯ ಕಾರಣ. ಮನೆಯ ಬದಲಿಗೆ ಹೊಟೇಲ್ಗಳಲ್ಲಿಯೇ ಹೆಚ್ಚಿನ ಆಹಾರ ಸೇವನೆ, ಶ್ರಮದಾಯಕವಲ್ಲದ ಕಾಯಕಗಳು ಅನಾರೋಗ್ಯ ಪೀಡಿತರನ್ನಾಗಿ ಮಾಡುತ್ತಿದೆ ಎಂದು ಮೆಲುಕು ಹಾಕಿದರು.
1963ರಲ್ಲಿ ಕೊಡಗಿನಲ್ಲಿ ಎರಡು ವರ್ಷ ಆರ್.ಎಸ್.ಎಸ್ ಸೇವೆಗಾಗಿ ಬಂದಿದ್ದು, ಇಲ್ಲಿನ ಸಂಸ್ಕøತಿ, ಸÀಂಸ್ಕಾರ ದೇಶ ಭಕ್ತಿ, ಹಿರಿಯರಿಗೆ ಗೌರವ ನೀಡುವ ಸಂಪ್ರದಾಯ ಮತ್ತು ಕೊಡಗಿನ ಜನರು ಈ ಭೂಮಿ, ನೀರು ಮತ್ತು ನದಿಯನ್ನು ದೇವರಂತೆ ಗೌರವಿಸುವ ವಿಚಾರ ಮನ ಸೆಳೆದಿದೆ. ಇದೇ ಸಂಸ್ಕøತಿಯನ್ನು ಕೊಡಗಿನ ಜನತೆ ಉಳಿಸಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಸಭೆಯಲ್ಲಿ ಆರ್.ಎಸ್.ಎಸ್. ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು ಅವರು ಸು. ರಾಮಣ್ಣ ಅವರನ್ನು ಪರಿಚಯಿಸಿದರು. ಮಹಾವಿಷ್ಣು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೇಚಮಾಡ ದಿನೇಶ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ, ಪೊನ್ನಂಪೇಟೆ ಎ.ಪಿ.ಎಂ.ಸಿ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ, ಪ್ರಮುಖರಾದ ಚಿರಿಯಪಂಡ ಡ್ಯಾನಿ, ಕೇಚಮಾಡ ವಿಶ್ವಾಸ್, ಕುಂಞÂಮಾಡ ಹರೀಶ್, ಹೆಮ್ಮಚ್ಚಿಮನೆ ಆಶಿತಾ, ಮಚ್ಚಮಾಡ ಗಪ್ಪಣ್ಣ, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಮಾಚಂಗಡ ಸುಜಾ ಪೂಣಚ್ಚ, ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ನೂರೇರ ಮನೋಜ್ ಹಾಗೂ ಇತರರು ಕಾರ್ಯಕ್ರಮವನ್ನು ಸಂಘಟಿಸಿದರು. ಮನ್ನಕಮನೆ ರಾಜು ಮದ್ಯಾಹ್ನದ ಅನ್ನದಾನ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.