ಗೋಣಿಕೊಪ್ಪಲು, ಏ. 12: ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಸಾವನ್ನಪ್ಪಿದರೆ ಕುಟುಂಬಕ್ಕೆ ರೂ. 5 ಸಾವಿರ ನೀಡಬೇಕು ಎಂಬ ಪಂಚಾಯತ್ ರಾಜ್ ಇಲಾಖೆಯ ಆದೇಶದ ಅನ್ವಯ ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಅವರು ಪಂಚಾಯಿತಿ ವ್ಯಾಪ್ತಿಯ ಬಿ.ಬಿ. ತಮ್ಮು, ಪಿ.ಎಸ್. ಚೋಮ ಹಾಗೂ ಪಿ.ಕೆ. ಮಲ್ಲಿಗೆ ಎಂಬವರ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಿಸಿದರು. ಈ ಸಂದರ್ಭ ಜಿ.ಪಂ. ಸದಸ್ಯೆ ಪಂಕಜ, ಗ್ರಾ.ಪಂ. ಸದಸ್ಯರುಗಳಾದ ಶಾಂತಮ್ಮ, ರೇಣುಕಾ ಹಾಗೂ ಪಿಡಿಓ ಚೇಂದಿರ ಎಂ. ಲೋಕನಾಥ್ ಇದ್ದರು.