ಮಡಿಕೆÉೀರಿ, ಏ. 13 : ಕೊಡವ ಹೊಸ ವರ್ಷಾಚರಣೆ ಎಡಮ್ಯಾರ್ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಾ. 14 ರಂದು ಗೋಣಿಕೊಪ್ಪಲಿನಲ್ಲಿ 21ನೇ ವರ್ಷದ ಬೃಹತ್ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಪಂಚಾಂಗದ ಪ್ರಕಾರ ಎಡಮ್ಯಾರ್ ಸೌರಮಾನ ಯುಗಾದಿ ಕೊಡವರ ಹೊಸ ವರ್ಷ ಆಚರಣೆಯ ಪವಿತ್ರ ಉತ್ಸವವಾಗಿದೆ ಎಂದರು. ಈ ಬಗ್ಗೆ ಕೊಡವ ಜನಪದೀಯ ಚರಿತ್ರೆ ಮತ್ತು ಕಾವ್ಯಗಳಲ್ಲಿ ವಿವರಿಸಲಾಗಿದೆ ಯೆಂದು ಅವರು ತಿಳಿಸಿದರು. ಹೊಸ ವರ್ಷದ ಪ್ರಯುಕ್ತ ಏಪ್ರಿಲ್ 14 ರ ಮುಂಜಾನೆ 6 ಗಂಟೆಗೆ ಚಿಕ್ಕ ಬೆಟ್ಟಗೇರಿ ಗ್ರಾಮದÀಲ್ಲಿರುವ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಉಳುಮೆ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನಡೆಸಲಾಗುವ ದೆಂದರು.
ಸಂಜೆ 6.30 ಗಂಟೆಗೆ ಗೋಣಿಕೊಪ್ಪದ ಎಪಿಎಂಸಿ ಯಾರ್ಡ್ನಿಂದ ಪರಿಮಳ ಮಂಗಳ ವಿಹಾರದವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ. ಬಸ್ ನಿಲ್ದಾಣದಲ್ಲಿ ‘ಮಾನವ ಸರಪಳಿ’ ಯನ್ನು ಆಯೋಜಿಸಲಾಗಿದ್ದು, ಈ ಸಂದರ್ಭ ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು ಮಂಡಿಸಲಾಗುವದು ಎಂದರು. ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಘೋಷಣೆ, ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನ ಭದ್ರತೆ, ದೇವಟ್ಪರಂಬುವಿನಲ್ಲಿ ಜಾಗತಿಕ ಸ್ಮಾರಕ ನಿರ್ಮಾಣ, ಜಾಗತಿಕ ಹೋಲೋ ಕಾಸ್ಟ್ ಮ್ಯೂಸಿಯಂ ಸ್ಥಾಪನೆ, ವಿಶ್ವ ಸಂಸ್ಥೆಯ ಹೋಲೋ ಕಾಸ್ಟ್ ರಿಮಂಬರೆನ್ಸ್ ಪಟ್ಟಿಗೆ ದೇವಟ್ ಪರಂಬು ಸೇರ್ಪಡೆ, ಫ್ರಾನ್ಸ್ ಕ್ಷಮೆ ಯಾಚನೆಗೆ ಒತ್ತಾಯ, ಕೊಡವ ಭಾಷೆಯನ್ನು 8ನೇ ಷೆಡ್ಯೂಲ್ಗೆ ಸೇರಿಸುವದು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುವದೆಂದು ಎನ್.ಯು. ನಾಚಪ್ಪ ತಿಳಿಸಿದರು.
ಸಿಎನ್ಸಿ ಹೋರಾಟದ ವಿರುದ್ಧ ಕೆಲವರು ಷಡ್ಯಂತ್ರ ನಡೆಸುತ್ತಿದ್ದರೂ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಇತ್ತೀಚೆಗೆ ಸಮಾಜ ಘಾತುಕ ಸಂಘÀಟನೆಗಳು ರಾಜ್ಯದ ಹಿರಿಯ ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವ ವಿಚಾರ ಬಹಿರಂಗ ಗೊಂಡಿದ್ದು, ಇದನ್ನು ಸಿಎನ್ಸಿ ತೀವ್ರವಾಗಿ ಖಂಡಿಸಲಿದೆ. ಪತ್ರಕರ್ತರಿಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ ಎನ್.ಯು.ನಾಚಪ್ಪ, ಜಿಲ್ಲೆಯಲ್ಲಿ ಬಾಂಗ್ಲಾ ದೇಶಿಗರಿಗೆ ನೀಡಲಾಗುತ್ತಿರುವ ಆಧಾರ್ ಕಾರ್ಡ್ ದಂಧೆಯ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೊಷ್ಠಿಯಲ್ಲಿ ಸಿಎನ್ಸಿ ಪ್ರಮುಖ ಪುಲ್ಲೇರ ಕಾಳಪ್ಪ ಉಪಸ್ಥಿತರಿದ್ದರು.