ಮಡಿಕೇರಿ, ಏ. 14: ಕ್ರೈಸ್ತ ಬಾಂಧವರು ಇಂದು ಶುಭ ಶುಕ್ರವಾರ (ಗುಡ್‍ಫ್ರೈಡೆ) ವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.ನಗರದ ಸಂತ ಮೈಕಲರ ಚರ್ಚ್‍ನಲ್ಲಿ ಕ್ರೈಸ್ತ ಬಾಂಧವರು ಶುಭ ಶುಕ್ರವಾರದ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳಾದ ಅಲ್ಫ್ರೆಡ್ ಜಾನ ಮೆಂಡೋನ್ಸಾ, ಡಾ. ರೋಹನ್, ಡಾ. ಮ್ಯಾನ್ಯೂಲ್ ಅವರುಗಳು ಪ್ರಾರ್ಥನೆಯನ್ನು ನೆರವೇರಿಸಿದರು. ಈ ಸಂದರ್ಭ ಭಕ್ತಾದಿಗಳು ಶಿಲುಬೆಗೆ ಗೌರವನಮನ ಸಲ್ಲಿಸಿದರು.
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಶುಭ ಶುಕ್ರವಾರ (ಗುಡ್‍ಫ್ರೈಡೆ) ಅಂಗವಾಗಿ ವಿಶೇಷಪ್ರಾರ್ಥನಾ ಕೂಟದಲ್ಲಿ ನೂರಾರು ಸಂಖ್ಯೆಯ ಭಕ್ತಾಧಿಗಳು ಭಾಗಿಯಾಗಿದ್ದರು.
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಶುಭ ಶುಕ್ರವಾರ ಅಂಗವಾಗಿ ಕ್ರೈಸ್ತ್ತ ಬಾಂಧವರು ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಯೇಸು ಶಿಲುಬೆಗೆ ಏರುವ ರೂಪಕವನ್ನು ಸಂತ ಅಂತೋಣಿ ಸಂತ ಮೇರಿ ಶಾಲಾ ಮೈದಾನದಲ್ಲಿ ನಡೆಸುವ ಪ್ರಾರ್ಥನಾಕೂಟದಲ್ಲಿ ಪ್ರಸ್ತುತ ಪಡಿಸುವ ಮೂಲಕ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.
ಮಧ್ಯಾಹ್ನ ದೇವಾಲಯ ಆವರಣದ ಶಾಲಾ ಮೈದಾನದಲ್ಲಿ ಮರದ ದಿಮ್ಮಿಗಳಿಂದ ತಯಾರಿ¸ Àಲಾದ ಬೃಹತ್ ಶಿಲುಬೆಗಳನ್ನು ಯುವಕ, ಯುವತಿಯರು, ಮಹಿಳೆಯರು, ಪುರುಷರು ಹೊತ್ತು ಸಾಗುವದ ರೊಂದಿಗೆ ಯೇಸು ಮಾನವ ಕುಲ ರಕ್ಷಣೆ ಮಾಡಲು ಶಿಲುಬೆಯನ್ನು ಹೊತ್ತು ಲೋಕವನ್ನು ರಕ್ಷಿಸಿದ ಅವರ ಸ್ಮರಣೆಯನ್ನು ಮಾಡುವ ಕಿರುರೂಪಕ ಪ್ರಾರ್ಥನಾ ಕೂಟದಲ್ಲಿ ಪ್ರಸ್ತುತ ಪಡಿಸಲಾಯಿತು.
ಸಂತ ದೇವಾಲಯದ ಧರ್ಮಗುರುಗಳಾದ ಫಾದರ್. ಎಡ್ವರ್ಡ್ ವಿಲಿಯಂ ಸಲ್ಡಾನ ಹಾಗೂ ಮೈಸೂರಿನ ಅಲ್ಪೋನ್ಸಾಬ್ರೀಠೊ ಪ್ರಾರ್ಥನೆ ನೆರವೇರಿಸಿದರು. ಕ್ರೈಸ್ತ ಬಾಂಧವರು ದಿವ್ಯ ಬಲಿಪೂಜೆ ಸಾಂಘ್ಯಗಳಲ್ಲಿ ಪಾಲ್ಗೊಂಡು ದೇವರ ಆಶೀರ್ವಚನವನ್ನು ಪಡೆದುಕೊಂಡರು.