ವೀರಾಜಪೇಟೆ, ಏ. 14 : ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನ ಭಾರತ ದೇಶದ್ದಾಗಿದೆ. ಇದನ್ನು ಯಾವ ಪ್ರಜಾಪ್ರಭುತ್ವ ದೇಶದಲ್ಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುರಭವನದಲ್ಲಿ ಆಯೋಜಿಸಿದ್ದ ಡಾ ಬಿ.ಆರ್. ಅಂಬೇಡ್ಕರ್‍ರವರ 126 ನೇ ಜನ್ಮ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೋಪಯ್ಯ ಅವರು ಸಂವಿಧಾನದಲ್ಲಿ ಮುಖ್ಯವಾಗಿ ಕರ್ತವ್ಯ ಹಾಗೂ ಮೂಲಭೂತ ಹಕ್ಕುಗಳು ಸೇರಿದಂತೆ ಹಲವಾರು ಅಂಶಗಳಿವೆ. ಆದರೆ ಸಂವಿಧಾನದ ಹಕ್ಕುಗಳು ಸೂಕ್ತ ರೀತಿಯಲ್ಲಿ ಜಾರಿಯಾಗುತ್ತಿಲ್ಲ. ಯಾವದಾದ ರೊಂದು ಜಾತಿಯಲ್ಲಿ ಹುಟ್ಟುವದು ಸಹಜ. ಜಾತಿ ಅಭಿಮಾನವು ಸಾಮಾನ್ಯ, ಆದರೆ ದೇಶಕ್ಕೆ ಮಹತ್ವದ ಕೊಡುಗೆಯಾಗಿ ಸಂವಿಧಾನವನ್ನು ನೀಡಿದ ವ್ಯಕ್ತಿಯನ್ನು ಒಂದು ವರ್ಗದ ನಾಯಕನೆಂದು ಬಿಂಬಿಸಬಾರದು ಎಂದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಉಪಾಧ್ಯಕ್ಷೆ ತಸ್ನೀಂ ಅಕ್ತರ್, ತಹಶೀಲ್ದಾರ್ ಮಹದೇವ ಸ್ವಾಮಿ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಕಿರಣ್ ಪಡ್ನೇಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಕೆ. ಪಾಂಡು ಉಪಸ್ಥಿತರಿದ್ದರು. ಇದೇ ಸಂದರ್ಭ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಾದ ಟಿ.ಶೆಟ್ಟಿಗೇರಿ ಪ್ರೌಢಶಾಲೆಯ ದೇವಕುಮಾರ್, ವೀರಾಜಪೇಟೆ ಜೂನಿಯರ್ ಕಾಲೇಜಿನ ಸಫ್ರೀನಾ ಹಾಗೂ ತಿತಿಮತಿ ಪ್ರೌಢಶಾಲೆಯ ಸುಜಾತ ಇವರಿಗೆ ಪ್ರೌಢ ಶಿಕ್ಷಣ ಮಂಡಳಿ ನೀಡಿದ ಲ್ಯಾಪ್‍ಟ್ಯಾಪ್‍ಗಳನ್ನು ಶಾಸಕ ಬೋಪಯ್ಯ ವಿತರಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರ್ಜಾತಿ ವಿವಾಹ ವಾದ 12 ಜನರಿಗೆ ಒಟ್ಟು ರೂ. 10.5 ಲಕ್ಷಗಳ ಆರ್ಥಿಕ ನೆರವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ವಿತರಿಸಿದರು. ದ್ವಿತೀಯ ಪಿಯುಸಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ. 60 ಅಂಕಗಳಿಸಿದ 67 ವಿದ್ಯಾರ್ಥಿ ಗಳಿಗೆ ರೂ. 13 ಲಕ್ಷದ 80 ಸಾವಿರ ವಿದ್ಯಾರ್ಥಿ ವೇತನ ಮಂಜೂರಾಗಿದ್ದು, ಇದನ್ನು 67 ಜನ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡ ಲಾಗಿರುವ ದೃಢೀಕರಣ ಪತ್ರವನ್ನು ಬೋಪಯ್ಯ ವಿತರಿಸಿದರು.